Asianet Suvarna News Asianet Suvarna News

ಕ್ರಿಕೆಟ್ ಬಿಟ್ಟು ರಾಹುಲ್ ಗಾಂಧಿ ಟ್ರೋಲ್ ಮಾಡಿದ ಸಂಜಯ್ ಮಂಜ್ರೇಕರ್!

ಸದಾ ಇತರರ ಟೀಕೆಗಳಿಂದ ಸುದ್ದಿಯಾಗುತ್ತಿದ್ದ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್, ಈ ಬಾರಿ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ಕಾಲೆಳೆದಿದ್ದಾರೆ. ಮಂಜ್ರೇಕರ್ ಟ್ವೀಟ್ ಏನು? ಇಲ್ಲಿದೆ

Sanjay manjrekar trolls rahul gandhi and congress after loksabha election result
Author
Bengaluru, First Published May 26, 2019, 1:21 PM IST
  • Facebook
  • Twitter
  • Whatsapp

ಮುಂಬೈ(ಮೇ.26): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಲೇ ಹೆಚ್ಚು ಸುದ್ದಿಯಾಗಿದ್ದಾರೆ. ಮಂಜ್ರೇಕರ್ ಕಮೆಂಟರಿ, ಟ್ವೀಟ್‌ಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಹಲವು ಬಾರಿ ಟೀಕೆ ವ್ಯಕ್ತವಾಗಿದೆ. ಇದೀಗ ಮಂಜ್ರೇಕರ್ ಕ್ರಿಕೆಟ್ ಬಿಟ್ಟು ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿಯನ್ನು ಟ್ರೋಲ್ ಮಾಡಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ 2019: ಭಾರತ ಲೀಗ್‌ನಿಂದಲೇ ಹೊರಬೀಳಲಿದೆ-ನಟ KRK ಟೀಕೆ!

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ನರೇಂದ್ರ ಮೋದಿ ಸತತ 2ನೇ ಬಾರಿಗೆ ಪ್ರಧಾನಿ ಮಂತ್ರಿಯಾಗಿ ಶೀಘ್ರದಲ್ಲೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರ ಬೆನ್ನಲ್ಲೇ ಮಂಜ್ರೇಕರ್, ಬಿಜೆಪಿ ಗೆಲುವನ್ನು ಟೀಂ ಇಂಡಿಯಾಗೆ ಹೋಲಿಸಿದ್ದಾರೆ. ಇಷ್ಟೇ ಅಲ್ಲ ಇದರ ಜೊತೆಗೆ ರಾಹುಲ್ ಗಾಂಧಿಯನ್ನು ಟ್ರೋಲ್ ಮಾಡಿದ್ದಾರೆ.

 

 

ಇದನ್ನೂ ಓದಿ: ಗಂಭೀರ್ ಸಿಕ್ಸರ್, ವಿಜೇಂದರ್ ಪಂಚರ್ - ಚುನಾವಣೆಯಲ್ಲಿ ಕ್ರೀಡಾಪಟುಗಳಿಗೆ ಸಿಹಿ-ಕಹಿ

ಬಿಜೆಪಿ ಗೆಲುವು ಹೇಗಿತ್ತು ಅಂದರೆ ಪಾಪುವಾ ನ್ಯೂಗಿನಿಯಾ ವಿರುದ್ದ ಟೀಂ ಇಂಡಿಯಾ ಗೆಲುವು ಸಾಧಿಸಿದಂತಿತ್ತು ಎಂದು ಟ್ವೀಟ್ ಮಾಡಿದ್ದಾರೆ. ಕ್ರಿಕೆಟ್ ಜಗತ್ತಿನಲ್ಲಿ ಪಾಪುವಾ ನ್ಯೂಗಿನಿಯಾ ತಂಡ ಈಗಷ್ಟೇ ಅಂಬೆಗಾಲಿಡುತ್ತಿದೆ. ಇನ್ನೂ ಕೂಡ ಐಸಿಸಿ ಮಾನ್ಯತೆ ಸಿಕ್ಕಿಲ್ಲ. ಇದರ ವಿರುದ್ದ ಬಲಿಷ್ಠ ಟೀಂ ಇಂಡಿಯಾ ಗೆಲುವು ಸಾಧಿಸಿದಂತಿತ್ತು. ಎಂದು ಬಿಜೆಪಿ ಗೆಲುವನ್ನು ಶ್ಲಾಘಿಸಿದ್ದಾರೆ. ಮಂಜ್ರೇಕರ್ ಪಪುವಾ ನ್ಯೂಗಿನಿಯಾ ಬದಲು ಪಾಪು ನ್ಯೂ ಗಿನಿ ಎಂದು ಬರೆಯೋ ಮೂಲಕ ರಾಹುಲ್ ಗಾಂಧಿಯನ್ನು ಪರೋಕ್ಷವಾಗಿ ಟ್ರೋಲ್ ಮಾಡಿದ್ದಾರೆ.  

Follow Us:
Download App:
  • android
  • ios