ಮ್ಯಾಂಚೆಸ್ಟರ್[ಜೂ.16]: ರೋಹಿತ್ ಶರ್ಮಾ ಆಕರ್ಷಕ ಶತಕ ಹಾಗೂ ಕೆ.ಎಲ್ ರಾಹುಲ್ ಮತ್ತು ನಾಯಕ ವಿರಾಟ್ ಕೊಹ್ಲಿ ಸಿಡಿಲಬ್ಬರದ ಅರ್ಧಶತಕಗಳ ನೆರವಿನಿಂದ ಟೀಂ ಇಂಡಿಯಾ 46.4 ಓವರ್’ಗಳಲ್ಲಿ 4 ವಿಕೆಟ್ ಕಳೆದುಕೊಂಡು 305 ರನ್ ಬಾರಿಸಿದೆ. ಈ ವೇಳೆ ವರುಣನ ಆಗಮನದಿಂದ ತಾತ್ಕಾಲಿಕವಾಗಿ ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ.

ಪಾಕ್ ವಿರುದ್ಧ ಸಚಿನ್, ಕೊಹ್ಲಿಗೂ ಆಗದ ದಾಖಲೆ ಇದೀಗ ರೋಹಿತ್ ಹೆಸರಿಗೆ..!

ಭಾರತ-ಪಾಕಿಸ್ತಾನ ನಡುವಿನ ಪಂದ್ಯವನ್ನು ಮೈದಾನದಲ್ಲೇ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಜಗತ್ತಿನ ನಾನಾ ಮೂಲೆಗಳಿಂದ ಮ್ಯಾಂಚೆಸ್ಟರ್’ನ ಓಲ್ಡ್ ಟ್ರಾಫೋರ್ಡ್ ಮೈದಾನಕ್ಕೆ ಆಗಮಿಸಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತನ್ನ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದೆ. ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಗೆದ್ದಂತೆ ಈ ಬಾರಿ ವಿಶ್ವಕಪ್ ಪಂದ್ಯದಲ್ಲೂ ಪಾಕ್ ಗೆಲ್ಲಬಹುದು ಎಂಬ ನಿರೀಕ್ಷೆಯಿಂದ ಬಂದಿದ್ದ ಪಾಕ್ ಅಭಿಮಾನಿಗಳಿಗೆ ರೋಹಿತ್, ರಾಹುಲ್, ಕೊಹ್ಲಿ ನಿರಾಸೆ ಮೂಡಿಸಿದ್ದಾರೆ.

ವಿಶ್ವಕಪ್ 2019: ಭಾರತ-ಪಾಕಿಸ್ತಾನ ಪಂದ್ಯ ತಾತ್ಕಾಲಿಕ ಸ್ಥಗಿತ

ಕೊನೆಗೂ ಖುಷಿಪಟ್ಟ ಪಾಕ್ ಅಭಿಮಾನಿಗಳು: ಪಾಕ್ ಬೌಲರ್’ಗಳನ್ನು ಮನಬಂದಂತೆ ದಂಡಿಸಿದ ಟೀಂ ಇಂಡಿಯಾ ಅಗ್ರಕ್ರಮಾಂಕದ ಬ್ಯಾಟ್ಸ್’ಮನ್’ಗಳು ಪಾಕ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಆದರೆ ಪಾಕ್ ವೇಗಿ ಮೊಹಮ್ಮದ್ ಆಮೀರ್, ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್ ಧೋನಿಯನ್ನು[01] ಅಲ್ಪಮೊತ್ತಕ್ಕೆ ಕಟ್ಟಿಹಾಕುವ ಮೂಲಕ ಪಾಕ್ ಅಭಿಮಾನಿಗಳು ನಿಟ್ಟುಸಿರು ಬಿಡುವಂತೆ ಮಾಡಿದರು.  ಧೋನಿ ವಿಕೆಟ್ ಬೀಳುತ್ತಿದ್ದಂತೆ ಮ್ಯಾಂಚೆಸ್ಟರ್’ನ ಫ್ಯಾನ್’ಜೋನ್’ನಲ್ಲಿ ಪಾಕ್ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ.

ಪಾಕ್ ಅಭಿಮಾನಿಗಳ ಈ ಸಂಭ್ರಮ ಸಾಕಷ್ಟು ವೈರಲ್ ಆಗುತ್ತಿದ್ದು, ಈ ವಿಡಿಯೋವನ್ನು ಐಸಿಸಿ ಟ್ವಿಟರ್’ನಲ್ಲಿ ಹಂಚಿಕೊಂಡಿದೆ. 

ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ...