ಮ್ಯಾಂಚೆಸ್ಟರ್(ಜೂ.16): ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಲೀಗ್ ಪಂದ್ಯ ಸ್ಥಗಿತಗೊಂಡಿದೆ. 46.4 ಓವರ್ ವೇಳೆಗೆ ಸುರಿದ ಮಳೆಯಿಂದಾಗಿ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪಾಕಿಸ್ತಾನ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 305 ರನ್ ರನ್ ಸಿಡಿಸಿದೆ.

ರೋಹಿತ್ ಶರ್ಮಾ 140, ರಾಹುಲ್ 57, ಹಾರ್ದಿಕ್ ಪಾಂಡ್ಯ 26 ರನ್ ಹಾಗೂ ಎಂ.ಎಸ್.ಧೋನಿ 1 ರನ್ ಸಿಡಿಸಿ ಔಟಾಗಿದ್ದಾರೆ.  ನಾಯಕ ವಿರಾಟ್ ಕೊಹ್ಲಿ ಹಾಗೂ ವಿಜಯ್ ಶಂಕರ್ ಕ್ರೀಸ್ ಕಾಯ್ದುಕೊಂಡಿದ್ದಾರೆ. ಕೊಹ್ಲಿ ಅಜೇಯ 71 ಹಾಗೂ ಶಂಕರ್ ಅಜೇಯ 3 ರನ್ ಸಿಡಿಸಿದ್ದಾರೆ.

ತುಂತುರ ಮಳೆಯಾಗುತ್ತಿರುವುದರಿಂದ ಪಂದ್ಯ ಸ್ಥಗಿತಗೊಳಿಸಲಾಗಿದೆ. ಶೀಘ್ರದಲ್ಲೇ ಪಂದ್ಯ ಪುನರ್ ಆರಂಭವಾಗೋ ಸಾಧ್ಯತೆ ಇದೆ. ಹೆಚ್ಚು ಸಮಯ ಮಳೆಗೆ ಆಹುತಿಯಾದರೆ ಓವರ್ ಕಡಿಗೊಳ್ಳಲಿದೆ.