ಮ್ಯಾಂಚೆಸ್ಟರ್[ಜು.09]: ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಭರ್ಜರಿ ಪ್ರದರ್ಶನ ಸೆಮಿಫೈನಲ್’ನಲ್ಲೂ ಮುಂದುವರೆದಿದ್ದು, ಭಾರತ ವಿರುದ್ಧ 67 ರನ್ ಬಾರಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ಜಡೇಜಾಗೆ ವಿಕೆಟ್ ಒಪ್ಪಿಸೋ ಮುನ್ನ ವಿಲಿಯಮ್ಸನ್ ಕಿವೀಸ್ ಪರ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರ ಎನ್ನುವ ದಾಖಲೆ ಬರೆದಿದ್ದಾರೆ.

ಕಿವೀಸ್ ಎದುರು ಬ್ರೇಕ್ ಆಗುತ್ತಾ ಮತ್ತಷ್ಟು ರೆಕಾರ್ಡ್ಸ್..?

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಆರಂಭದಲ್ಲೇ ಮಾರ್ಟಿಗ್ ಗಪ್ಟಿಲ್ ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಆ ಬಳಿಕ ಎಚ್ಚರಿಕೆ ಆಟಕ್ಕೆ ನಾಯಕ ವಿಲಿಯಮ್ಸನ್ ಮುಂದಾದರು. ವೃತ್ತಿಜೀವನದ 39ನೇ ಅರ್ಧಶತಕ ಸಿಡಿಸಿದರು. ವಿಲಿಯಮ್ಸನ್ 67 ರನ್ ಬಾರಿಸುತ್ತಿದ್ದಂತೆ ಕಿವೀಸ್ ಪರ ವಿಶ್ವಕಪ್ ಟೂರ್ನಿಯ ಆವೃತ್ತಿಯೊಂದರಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರ ಎನ್ನುವ ದಾಖಲೆ ಬರೆದರು. ಪ್ರಸಕ್ತ ಆವೃತ್ತಿಯಲ್ಲಿ ವಿಲಿಯಮ್ಸನ್ 548 ರನ್ ಬಾರಿಸುವ ಮೂಲಕ ಮಾರ್ಟಿನ್ ಗಪ್ಟಿಲ್ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕಿದರು.

ವಿಶ್ವಕಪ್ 2019: ಹೊಸ ದಾಖಲೆ ಬರೆದ ಅಫ್ರಿದಿ..!

ಹೌದು, ಈ ಮೊದಲು 2015ರ ವಿಶ್ವಕಪ್ ಟೂರ್ನಿಯಲ್ಲಿ ಕಿವೀಸ್ ಆರಂಭಿಕ ಬ್ಯಾಟ್ಸ್’ಮನ್ ಮಾರ್ಟಿನ್ ಗಪ್ಟಿಲ್ 547 ರನ್ ಬಾರಿಸಿದ್ದರು. ಆದರೆ ಇದೀಗ ವಿಲಿಯಮ್ಸನ್ 548 ರನ್ ಬಾರಿಸುವುದರೊಂದಿಗೆ ತಮ್ಮ ಹೆಸರಿಗೆ ಆ ದಾಖಲೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 2015ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿತ್ತಾದರೂ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಭಾರತ -ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡ್ಡಿ!

ಇದಷ್ಟೇ ಅಲ್ಲದೇ ವಿಶ್ವಕಪ್ ಟೂರ್ನಿಯೊಂದರಲ್ಲಿ ಗರಿಷ್ಠ ರನ್ ಬಾರಿಸಿದ ನಾಯಕರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಈ ಮೊದಲು 2007ರ ವಿಶ್ವಕಪ್ ಟೂರ್ನಿಯಲ್ಲಿ ಮಹೆಲಾ ಜಯವರ್ಧನೆ ಕೂಡಾ 548 ರನ್ ಬಾರಿಸಿದ್ದರು.   

ವಿಶ್ವಕಪ್ ಟೂರ್ನಿಯಲ್ಲಿ ಕಿವೀಸ್ ಪರ ಗರಿಷ್ಠ ರನ್ ಬಾರಿಸಿದ ಬ್ಯಾಟ್ಸ್’ಮನ್ ಗಳಿವರು

1. ಕೇನ್ ವಿಲಿಯಮ್ಸನ್- 548 [2019]
2. ಮಾರ್ಟಿನ್ ಗಪ್ಟಿಲ್- 547 [2015]
3. ಸ್ಕಾಟ್ ಸ್ಟೆರೀಸ್- 499 [2007]
4. ಮಾರ್ಟಿನ್ ಕ್ರೋವ್- 456 [1992]
5. ಸ್ಟಿಪನ್ ಫ್ಲೆಮಿಂಗ್ - 353 [2007]