ಭಾರತ -ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡ್ಡಿ!
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯ ರೋಚಕ ಘಟ್ಟದತ್ತ ಸಾಗುತ್ತಿರುವಾಗ ಮಳೆ ಅಡ್ಡಿಯಾಗಿದೆ. ಹೀಗಾಗಿ ಪಂದ್ಯ ತಾತ್ಕಾಲಿಕ ಸ್ಥಗಿತಗೊಂಡಿದೆ.
ಮ್ಯಾಂಚೆಸ್ಟರ್(ಜು.09): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ನ್ಯೂಜಿಲೆಂಡ್ 46.1 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 211 ರನ್ ಸಿಡಿಸಿತ್ತು. ದಿಢೀರ್ ಸುರಿದ ಮಳೆಯಿಂದ ಪಂದ್ಯವನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.
Bad news 😞
— Cricket World Cup (@cricketworldcup) July 9, 2019
The rain has increased, and the teams have had to leave the field.
New Zealand: 211/5 (46.1 overs)#INDvNZ | #CWC19 pic.twitter.com/Q0sPZPkhRm
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ಮಾರ್ಟಿನ್ ಗಪ್ಟಿಲ್ 1 ರನ್ ಸಿಡಿಸಿ ಹೊರನಡೆದರು. ಇತ್ತ ಎಚ್ಚರಿಕೆಯ ಹೆಜ್ಜೆ ಇಟ್ಟ ನ್ಯೂಜಿಲೆಂಡ್ ನಿಧಾನಗತಿಯಲ್ಲಿ ಬ್ಯಾಟ್ ಬೀಸಿತು. ಹೆನ್ರಿ ನಿಕೋಲಸ್ 28 ರನ್ ಸಿಡಿಸಿ ಐಟಾದರು. ನಾಯಕ ಕೇನ್ ವಿಲಿಯಮ್ಸನ್ 67, ಜೇಮ್ಸ್ ನೀಶಮ್ 12 ಹಾಗೂ ಕೊಲಿನ್ ಡೇ ಗ್ರ್ಯಾಂಡ್ ಹೊಮ್ಮೆ 16 ರನ್ ಸಿಡಿಸಿ ಔಟಾದರು. ಆದರೆ ರಾಸ್ ಟೇಲರ್ ಹಾಫ್ ಸೆಂಚುರಿ ಸಿಡಿಸಿ ಆಸರೆಯಾದರು.
46.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 211 ರನ್ ಸಿಡಿಸಿದಾಗ ಮಳೆ ಸುರಿಯಿತು. ಹೀಗಾಗಿ ಪಂದ್ಯ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ರಾಸ್ ಟೇಲರ್ ಅಜೇಯ 67 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.