ವಿಶ್ವಕಪ್ 2019: ಹೊಸ ದಾಖಲೆ ಬರೆದ ಅಫ್ರಿದಿ..!

ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ಯುವ ವೇಗಿ ಶಾಹಿನ್ ಅಫ್ರಿದಿ ಹೊಸ ದಾಖಲೆ ಬರೆದಿದ್ದಾರೆ. ಏನದು ದಾಖಲೆ ನೀವೇ ನೋಡಿ....

World Cup 2019 Pakistan speed star Shaheen Afridi Enters Record Books

ವಿಶ್ವಕಪ್ ಟೂರ್ನಿಯ ಕ್ಷಣಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

ಲಂಡನ್[ಜು.07]: ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ತನ್ನ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನದ ಯುವ ವೇಗಿ ಶಾಹಿನ್ ಅಫ್ರಿದಿ ಆರು ವಿಕೆಟ್ ಕಬಳಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. 

ಈ ಪಂದ್ಯದಲ್ಲಿ ಶಾಹಿನ್ 35 ರನ್‌ಗಳಿಗೆ 6 ವಿಕೆಟ್ ಪಡೆದರು. ವಿಶ್ವಕಪ್‌ನಲ್ಲಿ ಒಂದೇ ಪಂದ್ಯದಲ್ಲಿ 6 ವಿಕೆಟ್ ಕಬಳಿಸಿದ  ಪಾಕಿಸ್ತಾನದ ಮೊದಲ ವೇಗಿ ಎಂಬ ಹೆಗ್ಗಳಿಕೆಗೆ ಶಾಹಿನ್ ಪಾತ್ರರಾದರು. ಈ ಮೊದಲು ಶಾಹಿದ್ ಅಫ್ರಿದಿ 2011ರ ವಿಶ್ವಕಪ್ ಟೂರ್ನಿಯಲ್ಲಿ ಕೀನ್ಯಾ ವಿರುದ್ಧ 16 ರನ್ ನೀಡಿ 5 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದರು.

ಬಾಂಗ್ಲಾ ವಿರುದ್ಧ ಗೆಲುವು; ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ಗುಡ್ ಬೈ!

2019ರ ವಿಶ್ವಕಪ್‌ನಲ್ಲಿ6 ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿದರು. ವಿಶ್ವಕಪ್ ಇತಿಹಾಸದಲ್ಲಿ 5ಕ್ಕೂ ಹೆಚ್ಚು ವಿಕೆಟ್ ಪಡೆದ ಯುವ ಬೌಲರ್ ಶಾಹಿನ್ ಆಗಿದ್ದಾರೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 4ವಿಕೆಟ್ ಪಡೆದ 4ನೇ ಯುವ ಬೌಲರ್ ಎನಿಸಿದ್ದಾರೆ.

ಸೆಮೀಸ್ ಪ್ರವೇಶಿಸುವ ಹಾದಿಯಲ್ಲಿ ಪಾಕ್ ಎಡವಿದ್ದೆಲ್ಲಿ..?

ಶಾಹಿನ್ ಅಫ್ರಿದಿ ಮಾರಕ ದಾಳಿಯ ನೆರವಿನಿಂದ ಪಾಕಿಸ್ತಾನ ತಂಡ 94 ರನ್’ಗಳಿಂದ ಬಾಂಗ್ಲಾದೇಶವನ್ನು ಮಣಿಸಿತಾದರೂ ಸೆಮಿಫೈನಲ್ ಪ್ರವೇಶಿಸಲು ವಿಫಲವಾಯಿತು. ಅಮೋಘ ಪ್ರದರ್ಶನ ತೋರಿದ ಅಫ್ರಿದಿ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.

Latest Videos
Follow Us:
Download App:
  • android
  • ios