ಲೀಡ್ಸ್[ಜು.07]: ನಿವೃತ್ತಿ ಕುರಿತು ಭಾರತದ ಮಾಜಿ ನಾಯಕ ಎಂ. ಎಸ್.ಧೋನಿ ಕೊನೆಗೂ ಮೌನ ಮುರಿದಿದ್ದು, ನಾನು ಯಾವಾಗ ನಿವೃತ್ತಿ ಘೋಷಿಸುತ್ತೇನೋ ನನಗೆ ಗೊತ್ತಿಲ್ಲ ಎಂದಿದ್ದಾರೆ. 

ವಿಶ್ವಕಪ್ 2019: ಹೊಸ ದಾಖಲೆ ಬರೆದ ಅಫ್ರಿದಿ..!

ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ ಬಳಿಕ ಧೋನಿ, ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ ಎಂದು ಸಾಕಷ್ಟು ಚರ್ಚೆಗಳು ಆರಂಭವಾಗಿದ್ದವು, ಊಹಾಪೋಹಗಳು ಹರಿದಾಡಿದ್ದವು. ಇದೀಗ ಈ ಕುರಿತು ಸ್ವತಃ ಧೋನಿ ಪ್ರತಿಕ್ರಿಯೆ ನೀಡಿದ್ದು, ‘ನಾನು ಯಾವಾಗ ನಿವೃತ್ತಿ ಘೋಷಿಸು ತ್ತೇನೋ ನನಗೆ ಗೊತ್ತಿಲ್ಲ’ ಎಂದು ಹಿಂದಿ ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಧೋನಿಗೆ ICC ನುಡಿನಮನ : ’MSD ಬರೀ ಹೆಸರಲ್ಲ’..!

ಮಹೇಂದ್ರ ಸಿಂಗ್ ಧೋನಿ ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಕೇವಲ 223 ರನ್ ಬಾರಿಸಿದ್ದು, ಮಂದಗತಿಯ ಬ್ಯಾಟಿಂಗ್ ಗಾಗಿ ಸಾಕಷ್ಟು ಟೀಕೆ ಎದುರಿಸುತ್ತಿದ್ದಾರೆ. ಭಾರತ ಇದೀಗ ಶ್ರೀಲಂಕಾ ಮಣಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.