Asianet Suvarna News Asianet Suvarna News

ಮೂರನೇ ವಿಶ್ವಕಪ್ ಆಡುತ್ತಿರುವ ಡೇವಿಡ್ ವಾರ್ನರ್‌ಗೆ 3ನೇ ಸರ್ಫ್ರೈಸ್..!

ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸುತ್ತಿರುವ ಡೇವಿಡ್ ವಾರ್ನರ್ ಮೂರನೇ ಮಗುವಿಗೆ ತಂದೆಯಾಗಿದ್ದಾರೆ. ಮಗುವಿನ ಹೆಸರೇನು..? ಹೇಗಿದೆ ಮಗು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

World Cup 2019 David Warner welcomes new child in London
Author
London, First Published Jul 2, 2019, 11:24 AM IST
  • Facebook
  • Twitter
  • Whatsapp

ವಿಶ್ವಕಪ್ ಟೂರ್ನಿಯ ಪ್ರತಿಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

ಲಂಡನ್‌[ಜು.02]: ಆಸ್ಪ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ 3ನೇ ಮಗುವಿನ ತಂದೆಯಾಗಿದ್ದಾರೆ. ಭಾನುವಾರ ರಾತ್ರಿ 10.30ಕ್ಕೆ ವಾರ್ನರ್‌ ಪತ್ನಿ ಕ್ಯಾಂಡೈಸ್‌ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಮಗುವಿಗೆ ಐಲಾ ರೋಸ್‌ ವಾರ್ನರ್‌ ಎಂದು ನಾಮಕರಣ ಮಾಡಲಾಗಿದೆ. 3ನೇ ಮಗು ಜನಿಸಿದ ಸಂಭ್ರಮದಲ್ಲಿರುವ ವಾರ್ನರ್‌ 3 ಮಕ್ಕಳು ಹಾಗೂ ಕ್ಯಾಂಡೈಸ್‌ ಅವರೊಂದಿಗೆ ತೆಗೆಸಿಕೊಂಡಿರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದಾರೆ.

ಗಾಯದ ಮೇಲೆ ಬರೆ ಎಳೆದಂತಾದ ವಾರ್ನರ್ ಪರಿಸ್ಥಿತಿ..!

ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ವೇಳೆ ಬಾಲ್ ಟ್ಯಾಂಪರಿಂಗ್ ಮಾಡಿದ ತಪ್ಪಿಗಾಗಿ ಡೇವಿಡ್ ವಾರ್ನರ್ ಸೇರಿದಂತೆ ಮೂವರು ಕ್ರಿಕೆಟಿಗರು ನಿಷೇಧಕ್ಕೆ ಒಳಗಾಗಿದ್ದರು. ಇದಾದ ಕೆಲವೇ ದಿನಗಳಲ್ಲಿ ವಾರ್ನರ್ ಪತ್ನಿ ಕ್ಯಾಂಡೈಸ್ ವಾರ್ನರ್ ಗರ್ಭಪಾತಕ್ಕೆ ಒಳಗಾಗಿದ್ದರು. ಬಾಲ್ ಟ್ಯಾಂಪರಿಂಗ್ ಶಾಕ್, ದಿಢೀರ್ ದಕ್ಷಿಣ ಆಫ್ರಿಕಾದಿಂದ ಆಸ್ಟ್ರೇಲಿಯಾಗೆ ವಾಪಾಸಾದ ಒಂದು ವಾರದಲ್ಲೇ ಕ್ಯಾಂಡೈಸ್ ಗರ್ಭಪಾತಕ್ಕೆ ಒಳಗಾಗಿದ್ದನ್ನು ಸ್ವತಃ ವಾರ್ನರ್ ಪತ್ನಿ ಹೇಳಿಕೊಂಡಿದ್ದರು.

ಸಚಿನ್,ಹೆಡನ್ ದಿಗ್ಗಜರ ಸಾಲಿಗೆ ಸೇರಿದ ಡೇವಿಡ್ ವಾರ್ನರ್!

ಪ್ರಸ್ತುತ ವಿಶ್ವಕಪ್’ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸುತ್ತಿರುವ ಡೇವಿಡ್ ವಾರ್ನರ್ 2 ಶತಕ ಹಾಗೂ 3 ಅರ್ಧಶತಕ ಸಿಡಿಸಿದ್ದಾರೆ. ಇದರ ಜತೆಗೆ ಟೂರ್ನಿಯಲ್ಲಿ ವೈಯುಕ್ತಿಕ ಗರಿಷ್ಠ ರನ್[166] ಹಾಗೂ 516 ರನ್ ಸಿಡಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ರನ್ ಸಿಡಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 

Follow Us:
Download App:
  • android
  • ios