ಗಾಯದ ಮೇಲೆ ಬರೆ ಎಳೆದಂತಾದ ವಾರ್ನರ್ ಪರಿಸ್ಥಿತಿ..!

First Published 25, May 2018, 3:14 PM IST
Australian David Warner Hails Wife Candice's Courage After 'Heartbreaking' Loss
Highlights

‘ವಾರ್ನರ್’ರನ್ನು ಸ್ನಾನಗೃಹಕ್ಕೆ ಕರೆದೆ. ನನಗೆ ಅತಿಯಾದ ರಕ್ತ ಸ್ರಾವವಾಗುತ್ತಿತ್ತು. ಆಗಲೇ ಗರ್ಭಪಾತವಾಗಿದೆ ಎನ್ನುವ ಅರಿವು ನಮಗಾಯಿತು. ಇಬ್ಬರೂ ಕೈಹಿಡಿದುಕೊಂಡು ಅತ್ತೆವು’ ಎಂದು ವಾರ್ನರ್ ಪತ್ನಿ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದರು. 

ಸಿಡ್ನಿ[ಮೇ.25]: ಚೆಂಡು ವಿರೂಪ ಪ್ರಕರಣದಲ್ಲಿ ಡೇವಿಡ್ ವಾರ್ನರ್ ಸಿಲುಕಿದ ಬೆನ್ನಲ್ಲೇ ತಮಗೆ ಗರ್ಭಪಾತವಾದ ಕಹಿ ಸತ್ಯವನ್ನು ಅವರು ಪತ್ನಿ ಕ್ಯಾಂಡೈಸ್ ವಾರ್ನರ್ ಬಹಿರಂಗಪಡಿಸಿದರು. 
‘ಪ್ರಕರಣದಿಂದ ಆದ ಆಘಾತ, ದಿಢೀರ್ ಪ್ರಯಾಣ, ಒತ್ತಡದಿಂದಾಗಿ ನಾನು ದ. ಆಫ್ರಿಕಾದಿಂದ ಆಸ್ಟ್ರೇಲಿಯಾಗೆ ವಾಪಸಾದ ವಾರದ ಬಳಿಕ ಮಗು ಕಳೆದುಕೊಳ್ಳಬೇಕಾಯಿತು’ ಎಂದು ಕ್ಯಾಂಡೈಸ್ ಹೇಳಿದರು. ‘ವಾರ್ನರ್’ರನ್ನು ಸ್ನಾನಗೃಹಕ್ಕೆ ಕರೆದೆ. ನನಗೆ ಅತಿಯಾದ ರಕ್ತ ಸ್ರಾವವಾಗುತ್ತಿತ್ತು. ಆಗಲೇ ಗರ್ಭಪಾತವಾಗಿದೆ ಎನ್ನುವ ಅರಿವು ನಮಗಾಯಿತು. ಇಬ್ಬರೂ ಕೈಹಿಡಿದುಕೊಂಡು ಅತ್ತೆವು’ ಎಂದು ವಾರ್ನರ್ ಪತ್ನಿ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದರು. 
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬಾಲ್ ಟ್ಯಾಂಪರಿಂಗ್ ಮಾಡಿದ್ದಕ್ಕಾಗಿ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಹಾಗೂ ಕ್ಯಾಮರೋನ್ ಬೆನ್’ಕ್ರಾಫ್ಟ್ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯಿಂದ ನಿಷೇಧದ ಶಿಕ್ಷೆಗೆ ಗುರಿಯಾಗಿದ್ದಾರೆ. ವಾರ್ನರ್ ಹಾಗೂ ಸ್ಮಿತ್ ಅವರ ಮೇಲೆ 12 ತಿಂಗಳ ನಿಷೇಧ ಹೇರಿದ್ದರೆ, ಬೆನ್’ಕ್ರಾಫ್ಟ್ ಮೇಲೆ 9 ತಿಂಗಳ ನಿಷೇಧ ಹೇರಿದೆ.

loader