ಲಾರ್ಡ್ಸ್(ಜೂ.25): ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರಿಸುತ್ತಿರುವ ಆಸ್ಟ್ರೇಲಿಯಾ ಸ್ಪೋಟಕ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಲೀಗ್ ಪಂದ್ಯದಲ್ಲಿ ಹಾಫ್ ಸೆಂಚುರಿ ಸಿಡಿಸಿದ ಡೇವಿಡ್ ವಾರ್ನರ್ ಒಟ್ಟು 500 ರನ್ ಸಿಡಿಸಿದ ಸಾಧನೆ ಮಾಡಿದ್ದಾರೆ. 

ಇದನ್ನೂ ಓದಿ: ಧೋನಿಗೆ ಸಚಿನ್ ಕ್ಲಾಸ್: ಕಿತ್ತಾಡಿಕೊಂಡ ಅಭಿಮಾನಿಗಳು

ವಿಶ್ವಕಪ್ ಟೂರ್ನಿಯ 7 ಇನ್ನಿಂಗ್ಸ್‌ಗಳಿಂದ 500 ರನ್ ಪೂರೈಸೋ ಮೂಲಕ ವಾರ್ನರ್, ವಿಶ್ವಕಪ್ ಟೂರ್ನಿಯಲ್ಲಿ 500 ರನ್ ಸಿಡಿಸಿದ 5ನೇ ಆರಂಭಿಕ ಬ್ಯಾಟ್ಸ್‌ಮನ್ ಅನ್ನೋ ದಾಖಲೆ ಬರೆದಿದ್ದಾರೆ. ಇದಕ್ಕೂ ಮೊದಲು  ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ಆಸ್ಟ್ರೇಲಿಯಾದ  ಮ್ಯಾಥ್ಯೂ ಹೇಡನ್ ಶ್ರೀಲಂಕಾ ತಿಲಕರತ್ನೆ ದಿಲ್ಶಾನ್ ಹಾಗೂ ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ ಆರಂಭಿಕರಾಗಿ 500 ರನ್ ಸಿಡಿಸಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ಹೇಗೆ ಬೌಲಿಂಗ್ ಮಾಡಬೇಕೆಂದು ಗೊತ್ತು-ಬಾಂಗ್ಲಾ ಕೋಚ್ ಜೋಶಿ!

ಸಚಿನ್ ತೆಂಡುಲ್ಕರ್ ವಿಶ್ವಕಪ್‌ ಟೂರ್ನಿಯಲ್ಲಿ ಆರಂಭಿಕನಾಗಿ 2 ಬಾರಿ 500 ರನ್ ಸಿಡಿಸಿದ್ದಾರೆ. 1996 ಹಾಗೂ 2003ರ ವಿಶ್ವಕಪ್ ಟೂರ್ನಿಯಲ್ಲಿ  ಸಚಿನ್ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಸತತ 2 ಬಾರಿ 500 ರನ್ ಸಿಡಿಸಿದ ಏಕೈಕ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದಾರೆ.