ವಿಶ್ವಕಪ್ ಟೂರ್ನಿಯ ಅತಿ ರೋಚಕ ಪಂದ್ಯಗಳಲ್ಲಿ ಒಂದು ಎನಿಸಿದ್ದ ನ್ಯೂಜಿಲೆಂಡ್-ವೆಸ್ಟ್ ಇಂಡೀಸ್ ನಡುವಿನ ಪಂದ್ಯ ವೀಕ್ಷಿಸಲು ಕೆಲಹೊತ್ತು ವಿಮಾನ ಹಾರಟ ವಿಳಂಬವಾದ ಘಟನೆ ಬೆಳಕಿಗೆ ಬಂದಿದೆ. ಅಷ್ಟಕ್ಕೂ ಏನಿದು ಸ್ಟೋರಿ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...
ಆಕ್ಲೆಂಡ್(ಜೂ.25): ವೆಸ್ಟ್‌ಇಂಡೀಸ್-ನ್ಯೂಜಿಲೆಂಡ್ ನಡುವಿನ ಪಂದ್ಯ ಈ ವಿಶ್ವಕಪ್‌ನ ಅತಿರೋಚಕ ಪಂದ್ಯವೆನಿಸಿಕೊಂಡಿತು. ಈ ಪಂದ್ಯದಲ್ಲಿ ವಿಲಿಯಮ್ಸನ್ ಪಡೆಯ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದ ಅಭಿಮಾನಿಗಳಿಗಾಗಿ ವಿಮಾನ ಹಾರಾಟ ವಿಳಂಬಗೊಂಡ ಪ್ರಸಂಗ ನ್ಯೂಜಿಲೆಂಡ್‌ನಲ್ಲಿ ನಡೆದಿದೆ.
ಬ್ರಾಥ್ವೈಟ್ ಹೋರಾಟ ವ್ಯರ್ಥ- ನ್ಯೂಜಿಲೆಂಡ್‌ಗೆ 5 ರನ್ ರೋಚಕ ಗೆಲುವು!
ಇಲ್ಲಿನ ಸಂಸದ ಕೀರನ್ ಮೆಕ್‌ಅನುಟ್ಲೆ ಟ್ವೀಟರ್‌ನಲ್ಲಿ ರೋಚಕ ಕ್ಷಣಗಳ ವಿವರವನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಕೊನೆ 12 ಎಸೆತ, 1 ವಿಕೆಟ್ ಬಾಕಿ ಇತ್ತು. ಎಲ್ಲರೂ ತಮ್ಮ ಮೊಬೈಲ್‌ಗಳಲ್ಲಿ ಪಂದ್ಯ ವೀಕ್ಷಿಸುತ್ತಿದ್ದರು. ವಿಮಾನ ಹೊರಟರೆ ಪಂದ್ಯ ವೀಕ್ಷಿಸಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ, ಪಂದ್ಯ ಮುಗಿಯುವ ವರೆಗೂ ಕಾಯುವಂತೆ ಕೋರಿದೆವು. ನಮ್ಮ ತಂಡ ಗೆದ್ದ ಮೇಲೆಯೇ ಹಾರಾಟ ಶುರುವಾಗಿದ್ದು. ಆಗಸದಲ್ಲೇ ನಾವೆಲ್ಲಾ ಸಂಭ್ರಮಿಸಿದೆವು’ ಎಂದು ಕೀರನ್ ಬರೆದಿದ್ದಾರೆ.
ರಬಾಡ ಫೇಲ್ ಆಗಲು IPL ಕಾರಣ ಎಂದ ಕ್ಯಾಪ್ಟನ್
ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ ತಂಡವು 291 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು 164 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಸುಲಭ ಸೋಲಿನತ್ತ ಮುಖಮಾಡಿತ್ತು. ಈ ವೇಳೆ ಸ್ಫೋಟಕ ಬ್ಯಾಟಿಂಗ್ ನಡೆಸಿದ ಕಾರ್ಲೋಸ್ ಬ್ರಾಥ್’ವೇಟ್ ಕೇವಲ 82 ಎಸೆತಗಳಲ್ಲಿ 9 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 101 ರನ್ ಬಾರಿಸಿ ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿದ್ದರು. ಕೊನೆಯ 2 ಓವರ್ ಗಳಲ್ಲಿ ಕೇವಲ 8 ರನ್ ಗಳ ಅವಶ್ಯಕತೆಯಿತ್ತು. 49ನೇ ಓವರ್’ನ ಕೊನೆಯ ಎಸೆತದಲ್ಲಿ ನೀಶಮ್ ಬೌಲಿಂಗ್’ನಲ್ಲಿ ಬ್ರಾಥ್’ವೇಟ್ ಕ್ಯಾಚ್ ನೀಡುವ ಮೂಲಕ ಕೇವಲ 5 ರನ್ ಗಳಿಂದ ವೆಸ್ಟ್ ಇಂಡೀಸ್ ರೋಚಕ ಸೋಲು ಕಂಡಿತ್ತು.
