ಲಂಡನ್‌[ಜೂ.25]: ಏಕದಿನ ವಿಶ್ವಕಪ್‌ನ ಸೆಮೀಸ್‌ ರೇಸ್‌ನಿಂದ ಹೊರಬೀಳುತ್ತಿದ್ದಂತೆ ದಕ್ಷಿಣ ಆಫ್ರಿಕಾ ನಾಯಕ ಫಾಫ್‌ ಡು ಪ್ಲೆಸಿ, ತಮ್ಮ ತಂಡದ ಮುಂಚೂಣಿ ವೇಗಿ ಕಗಿಸೋ ರಬಾಡ ಕಳಪೆ ಪ್ರದರ್ಶನಕ್ಕೆ ಐಪಿಎಲ್‌ ಕಾರಣ ಎಂದು ಆರೋಪಿಸಿದ್ದಾರೆ. 

ವಿರಾಟ್ ಕೊಹ್ಲಿಯನ್ನು ಕೆಣಕಿದ ರಬಾಡ..!

2019ರಲ್ಲಿ ರಬಾಡ ಒಟ್ಟು 303 ಓವರ್‌ ಬೌಲ್‌ ಮಾಡಿದ್ದು, ಇದರಲ್ಲಿ 47 ಓವರ್‌ಗಳನ್ನು ಐಪಿಎಲ್‌ನಲ್ಲಿ ಎಸೆದಿದ್ದರು. ಕೆಲಸದ ಒತ್ತಡವನ್ನು ಗಮನದಲ್ಲಿಟ್ಟುಕೊಂಡು ರಬಾಡರನ್ನು ಐಪಿಎಲ್‌ನಿಂದ ದೂರವಿರಿಸುವ ಬಗ್ಗೆ ದ.ಆಫ್ರಿಕಾ ಕ್ರಿಕೆಟ್‌ ಚಿಂತನೆ ನಡೆಸಿತ್ತು ಎನ್ನುವ ವಿಷಯನ್ನು ಡು ಪ್ಲೆಸಿಸ್ ಬಹಿರಂಗಗೊಳಿಸಿದ್ದಾರೆ. ‘ಐಪಿಎಲ್‌ನಲ್ಲಿ ಆಡದಂತೆ ರಬಾಡರನ್ನು ಕೇಳಿಕೊಂಡಿದ್ದೆ. ಆದರೆ ಅವರು ಟೂರ್ನಿಯಲ್ಲಿ ಆಡಲು ಭಾರತಕ್ಕೆ ತೆರಳಿದರು’ ಎಂದು ಫಾಫ್‌ ಹೇಳಿದ್ದಾರೆ.

ವಿರಾಟ್ ಕೊಹ್ಲಿಯನ್ನು ಕೆಣಕಿದ ರಬಾಡ..!

12ನೇ ಆವೃತ್ತಿಯ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಟಲ್ಸ್ ತಂಡವನ್ನು ಪ್ರತಿನಿಧಿಸಿದ್ದ ರಬಾಡ ಆಡಿದ 12 ಪಂದ್ಯಗಳಲ್ಲಿ 25 ವಿಕೆಟ್ ಪಡೆಯುವ ಮೂಲಕ ಗರಿಷ್ಠ ವಿಕೆಟ್ ಸಾಧಕರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರು. 17 ಪಂದ್ಯವನ್ನಾಡಿದ CSK ಸ್ಪಿನ್ನರ್ ಇಮ್ರಾನ್ ತಾಹಿರ್ 26 ವಿಕೆಟ್ ಪಡೆದು ಮೊದಲ ಸ್ಥಾನಕ್ಕೇರಿದ್ದರು. ಆದರೆ ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ರಬಾಡ ನೀರಸ ಪ್ರದರ್ಶನ ತೋರಿದ್ದು, 7 ಪಂದ್ಯಗಳಲ್ಲಿ ಬರೋಬ್ಬರಿ 305 ರನ್ ನೀಡಿ ಕೇವಲ 6 ವಿಕೆಟ್ ಕಬಳಿಸುವ ಮೂಲಕ ಗರಿಷ್ಠ ವಿಕೆಟ್ ಸಾಧಕರ ಪಟ್ಟಿಯಲ್ಲಿ 26ನೇ ಸ್ಥಾನದಲ್ಲಿದ್ದಾರೆ.