ಸೌಥಾಂಪ್ಟನ್(ಜೂ.24): ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಹರಸಾಹಸದ ಗೆಲುವಿನ ಬಳಿಕ ಟೀಂ ಇಂಡಿಯಾ ನಿಟ್ಟುಸಿರು ಬಿಟ್ಟಿದೆ.  ಅಫ್ಘಾನ್ ವಿರುದ್ದ ಪಂದ್ಯ ಗೆಲ್ಲಲು ಟೀಂ ಇಂಡಿಯಾ ಪರದಾಡಿದ್ದು ಸುಳ್ಳಲ್ಲ. ಸುಲಭ ಗುರಿ ನೀಡಿದ ಕಾರಣ ಪ್ರತಿ ಎಸೆತವೂ ಭಾರತಕ್ಕೆ ಮುಖ್ಯವಾಗಿತ್ತು. ಹೀಗಾಗಿ ಸಿಕ್ಕ ಅವಕಾಶಗಳಲ್ಲಿ ಟೀಂ ಇಂಡಿಯಾ ಔಟ್‌ಗಾಗಿ ಅಂಪೈರ್‌ಗೆ ಮನವಿ ಮಾಡುತಿತ್ತು . ಅಂಪೈರ್ ಜೊತೆ ಔಟ್‌ಗಾಗಿ ವಾಗ್ವಾದ ನಡೆಸಿದ ನಾಯಕ ವಿರಾಟ್ ಕೊಹ್ಲಿಗೆ ಈಗಾಗಲೇ ಪಂದ್ಯದ ಶೇಕಡಾ 25 ರಷ್ಟು ದಂಡ ಹಾಕಲಾಗಿದೆ. ಕೊಹ್ಲಿ ಹಾಗೂ ಅಂಪೈರ್ ಜೊತೆಗಿನ ವಾಗ್ವಾದದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ.