7 ರನ್ ಗಡಿ ದಾಟಿದ ಬಾಂಗ್ಲಾದೇಶ- ಪಾಕಿಸ್ತಾನ ಟೂರ್ನಿಯಿಂದ ಔಟ್!
ಪಾಕಿಸ್ತಾನ ವಿರುದ್ಧ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ 7 ರನ್ ಗಡಿ ದಾಟಿದೆ. ಬಾಂಗ್ಲಾ ಕೇವಲ 7 ರನ್ ಸಿಡಿಸುತ್ತಿದ್ದಂತೆ ಪಾಕಿಸ್ತಾನ ಸೆಮಿಫೈನಲ್ ಕನಸಿನ ಗೋಪುರ ಪುಡಿ ಪುಡಿಯಾಗಿದೆ.
ಲಾರ್ಡ್ಸ್(ಜು05): ವಿಶ್ವಕಪ್ ಲೀಗ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ 316 ರನ್ ಟಾರ್ಗೆಟ್ ಪಡೆದಿರುವ ಬಾಂಗ್ಲಾದೇಶ 7 ರನ್ ಗಡಿ ದಾಟಿದೆ. ಈ ಮೂಲಕ ಪಂದ್ಯ ಮುಕ್ತಾಯವಾಗೋ ಮುನ್ನವೇ ಪಾಕಿಸ್ತಾನ ಟೂರ್ನಿಯಿಂದ ಹೊರಬಿದ್ದಿದೆ. ನ್ಯೂಜಿಲೆಂಡ್ ಹಿಂದಿಕ್ಕಿ ಸೆಮಿಫೈನಲ್ ಪ್ರವೇಶಿಸಲು ಬಾಂಗ್ಲಾದೇಶವನ್ನು 7 ರನ್‌ಗೆ ಆಲೌಟ್ ಮಾಡಬೇಕಿತ್ತು. ಆದರೆ ಬಾಂಗ್ಲಾ 7 ರನ್ ಗಡಿ ದಾಟಿ ಮುಂದೆ ಸಾಗಿದೆ. ಹೀಗಾಗಿ ಪಾಕಿಸ್ತಾನ ಸೆಮಿಫೈನಲ್ ಹೋರಾಟ ಅಂತ್ಯಗೊಂಡಿದೆ.
ಇದನ್ನೂ ಓದಿ: ಸಚಿನ್ ದಾಖಲೆ ಅಳಿಸಿಹಾಕಿದ 18ರ ಆಫ್ಘನ್ ಪೋರ..!
ಬಾಂಗ್ಲಾ ವಿರುದ್ಧ ಪಾಕಿಸ್ತಾನಕ್ಕೆ ಕನಿಷ್ಠ 308 ರನ್ ಗೆಲುವಿನ ಅಗತ್ಯವಿತ್ತು. ಹೀಗಾದಲ್ಲಿ ಮಾತ್ರ ಸೆಮೀಸ್ ಪ್ರವೇಶ ಸಾಧ್ಯವಿತ್ತು. ಆದರೆ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿ 315 ರನ್ ಸಿಡಿಸಿತು. ಹೀಗಾಗಿ ಬಾಂಗ್ಲಾ ತಂಡವನ್ನು ಕೇವಲ 7 ರನ್‌ಗೆ ಕಟ್ಟಿ ಹಾಕಬೇಕಾದ ಅನಿವಾರ್ಯತೆಯಲ್ಲಿತು. ಆದರೆ ಬಾಂಗ್ಲಾದೇಶ 7 ರನ್ ಸಿಡಿಸಿ ಮುನ್ನಗ್ಗುತ್ತಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿದರೆ, 11 ಅಂಕಗಳೊಂದಿಗೆ 5ನೇ ಸ್ಥಾನಕ್ಕೆ ತೃಪ್ತಿಪಡಲಿದೆ. ಬಾಂಗ್ಲಾದೇಶ ಗೆಲುವು ಸಾಧಿಸಿದರೆ, 7ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಲಗ್ಗೆ ಇಡಲಿದೆ. ಪಾಕಿಸ್ತಾನ 5ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಕುಸಿಯಲಿದೆ.
ಇದನ್ನೂ ಓದಿ: ಜಡೇಜಾ ಮಾತಿನೇಟು: ಸಂಜಯ್ ಮಂಜ್ರೇಕರ್‌ಗೆ ಬೇಕಿತ್ತಾ ಇದು..?
ನ್ಯೂಜಿಲೆಂಡ್ 11 ಅಂಕದೊಂದಿಗೆ 4ನೇ ಸ್ಥಾನದಲ್ಲಿದೆ. ಉತ್ತಮ ರನ್ ರೇಟ್ ಹೊಂದಿರುವ ನ್ಯೂಜಿಲೆಂಡ್ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡಿದೆ. ಜುಲೈ 9 ರಂದು ಮೊದಲ ಹಾಗೂ ಜುಲೈ 11 ರಂದು 2ನೇ ಸೆಮಿಫೈನಲ್ ನಡೆಯಲಿದೆ. ಜುಲೈ 14 ರಂದು ಲಾರ್ಡ್ಸ್ ಮೈದಾನದಲ್ಲಿ ಫೈನಲ್ ಹೋರಾಟ ನಡೆಯಲಿದೆ.