ಸಚಿನ್ ದಾಖಲೆ ಅಳಿಸಿಹಾಕಿದ 18ರ ಆಫ್ಘನ್ ಪೋರ..!
ವಿಶ್ವಕಪ್ ಟೂರ್ನಿಯಲ್ಲಿ ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಆಫ್ಘನ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅಲಿ ಖಿಲ್ ಅಳಿಸಿಹಾಕಿದ್ದಾರೆ. ಅಷ್ಟಕ್ಕೂ ಏನದು ದಾಖಲೆ ನೀವೇ ನೋಡಿ...
ವಿಶ್ವಕಪ್ ಟೂರ್ನಿಯ ಕ್ಷಣಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...
ಲಂಡನ್[ಜು.05]: ಆಫ್ಘನ್ ಯುವ ಪ್ರತಿಭೆ 18 ವರ್ಷದ ಇಕ್ರಾಮ್ ಅಲಿ ಖಿಲ್,ಬರೋಬ್ಬರಿ 27 ವರ್ಷಗಳಿಂದ ಟೀಂ ಇಂಡಿಯಾದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ಅಪರೂಪದ ದಾಖಲೆಯನ್ನು ಅಳಿಸಿಹಾಕಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಅಲಿ ಖಿಲ್ 93 ಎಸೆತಗಳಲ್ಲಿ 86 ರನ್ ಬಾರಿಸುವ ಮೂಲಕ ಗಮನ ಸೆಳೆದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಆದರೆ 1992ರಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕಲು ಯಶಸ್ವಿಯಾದರು.
ವಿಶ್ವಕಪ್ ಸೆಮೀಸ್‌ನಲ್ಲಿ ಟಾಪ್ 4 ತಂಡಗಳ ಸೆಣಸಾಟ
ಏನದು ದಾಖಲೆ..?
ಅಲಿ ಖಿಲ್ ಬರೋಬ್ಬರಿ 86 ಬಾರಿಸುವ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಅತಿ ಕಿರಿಯ ಕ್ರಿಕೆಟಿಗ ಎನ್ನುವ ದಾಖಲೆಗೆ [18 ವರ್ಷ 278 ದಿನ] ಆಫ್ಘನ್ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಪಾತ್ರರಾಗಿದ್ದಾರೆ. ಈ ಮೊದಲು ಸಚಿನ್ ತೆಂಡುಲ್ಕರ್ 1992ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 81 ರನ್ ಸಿಡಿಸಿದ್ದರು. ಆಗ ಸಚಿನ್ ವಯಸ್ಸು 18 ವರ್ಷ 318 ದಿನಗಳಾಗಿದ್ದವು. ಕಾಕತಾಳೀಯವೆಂದರೆ, ಸಚಿನ್’ಗೂ ಕೂಡಾ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಿರಲಿಲ್ಲ.
ಗಾಯದ ಸಮಸ್ಯೆಯಿಂದ ಮೊಹಮ್ಮದ್ ಶೆಹಜಾದ್ ಬದಲಿಗೆ ತಂಡ ಕೂಡಿಕೊಂಡ ಅಲಿ ಖಿಲ್ ಕೊನೆಯ ಪಂದ್ಯದಲ್ಲಿ ವಿಂಡೀಸ್ ತಂಡದ ಬೌಲರ್ ಗಳನ್ನು ದಿಟ್ಟವಾಗಿ ಎದುರಿಸಿದರಾದರೂ ತಂಡಕ್ಕೆ ಚೊಚ್ಚಲ ಗೆಲುವು ದಕ್ಕಿಸಿಕೊಡಲು ಸಾಧ್ಯವಾಗಲಿಲ್ಲ. ಈ ವಿಶ್ವಕಪ್ ಟೂರ್ನಿಯಲ್ಲಿ ಆಫ್ಘಾನಿಸ್ತಾನ ಆಡಿದ ಎಲ್ಲಾ 9 ಪಂದ್ಯಗಳಲ್ಲೂ ಸೋಲು ಕಾಣುವುದರೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ತಂಡವಾಗಿಯೇ ತನ್ನ ಅಭಿಯಾನ ಅಂತ್ಯಗೊಳಿಸಿದೆ.