ಮ್ಯಾಂಚೆಸ್ಟರ್(ಜೂ.15): ಭಾರತ ಹಾಗೂ ಪಾಕಿಸ್ತಾನ ಪಂದ್ಯ ವೀಕ್ಷಿಸಲು ಈಗಾಗಲೇ ಟೀಂ ಇಂಡಿಯಾ ಅಭಿಮಾನಿಗಳು ಇಂಗ್ಲೆಂಡ್‌ಗೆ ತೆರಳಿದ್ದಾರೆ. ಹಲವರಿಗೆ ಪಂದ್ಯದ ಟಿಕೆಟ್ ಸಿಗದ ಕಾರಣ ನಿರಾಸೆ ಅನುಭವಿಸಿದ್ದಾರೆ. ಈ ಕುರಿತು ನಾಯಕ ವಿರಾಟ್ ಕೊಹ್ಲಿ ಮನವಿ ಮಾಡಿದ್ದಾರೆ. ಪಂದ್ಯ ನೋಡಲು ಬನ್ನಿ ಆದರೆ ಪಾಸ್ ಮಾತ್ರ ಕೇಳಬೇಡಿ ಎಂದಿದ್ದಾರೆ.

ಇದನ್ನೂ ಓದಿ: ಇಂಡೋ-ಪಾಕ್ ಪಂದ್ಯಕ್ಕೆ ಕ್ರಿಸ್ ಗೇಲ್ ಸ್ಪೆಷಲ್ ಡ್ರೆಸ್ - ಯಾರಿಗೆ ಬೆಂಬಲ?

ಪಾಕಿಸ್ತಾನ ವಿರುದ್ದದ ಪಂದ್ಯಕ್ಕೂ ಮುನ್ನ ನಡೆದ ನಡೆದ ಸುದ್ದಿಗೋಷ್ಠಿಯಲ್ಲಿ ಕೊಹ್ಲಿ ಟಿಕೆಟ್ ಕುರಿತು ಇಂಟ್ರೆಸ್ಟಿಂಗ್ ಕತೆ ಹೇಳಿದ್ದಾರೆ. ಪ್ರತಿಷ್ಠಿತ  ಟೂರ್ನಿಗೆ ತೆರಳೋ ಮುನ್ನ ಪಂದ್ಯದ ಪಾಕ್ ಸಿಗುವುದಿಲ್ಲ ಎಂದು ಗೆಳೆಯರ ಬಳಿ ಸ್ಪಷ್ಟವಾಗಿ ಹೇಳಿರಬೇಕು ಎಂದು ಕೊಹ್ಲಿ ಹೇಳಿದ್ದಾರೆ. ನನ್ನ ಗೆಳೆಯರು ಫೋನ್ ಮೂಲಕ ಮಾತನಾಡಿದ್ದರು. ನಾವು ಪಂದ್ಯ ನೋಡಲು ಬರುತ್ತೇವೆ ಎಂದರು. ಪಂದ್ಯ ವೀಕ್ಷಿಸಲು ಬನ್ನಿ, ಅದಕ್ಕೆ ನನ್ನಲ್ಲಿ ಕೇಳಬೇಕಾಗಿಲ್ಲ. ಎಲ್ಲರ ಮನೆಯಲ್ಲಿ ಟಿವಿ ಇದೆ, ಆರಾಮವಾಗಿ ಟಿವಿಯಲ್ಲಿ ಪಂದ್ಯ ನೋಡಿ. ಆದರೆ ಪಾಸ್ ಮಾತ್ರ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ: ಇಂಡೋ-ಪಾಕ್ ಪಂದ್ಯ- ಪ್ರತಿ ಸೆಕೆಂಡ್ ಜಾಹೀರಾತಿಗೆ 2.5 ಲಕ್ಷ ರೂ!

ಇಷ್ಟೇ ಅಲ್ಲ, ನೀವು ಒಂದು ಬಾರಿ ಟಿಕೆಟ್ ಹೊಂದಿಸಿದರೆ ಅದಕ್ಕೆ ಅಂತ್ಯವಿರುವುದಿಲ್ಲ. ಕಾರಣ ಈ ಟೂರ್ನಿಗಳಲ್ಲಿ ನಮಗೆ ನಿಗದಿತ ಟಿಕೆಟ್ ಸಿಗುತ್ತದೆ. ಕುಟುಂಬಸ್ಥರಿಗೆ ನಾವು ಪಾಸ್ ನೀಡಬೇಕಾಗುತ್ತೆ. ಹೀಗಾಗಿ ಇತರರಿಗೆ ಪಾಸ್ ನೀಡಲು ಸಾಧ್ಯವಾಗುವುದಿಲ್ಲ. ಟಿಕೆಟ್ ಖರೀದಿಸಿ ಪಂದ್ಯ ವೀಕ್ಷಿಸಿದರೆ ಉತ್ತಮ. ಆದರೆ ಫ್ರೀ ಪಾಸ್ ಕೇಳದಿದ್ದರೆ ಸಾಕು ಎಂದಿದ್ದಾರೆ.