ಲಂಡನ್(ಜೂ.15): ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಹೋರಾಟ ಉಭಯ ದೇಶಗಳ ಅಭಿಮಾನಿಗಳಿಗೆ ಮಾತ್ರವಲ್ಲ ವಿಶ್ವ ಕ್ರಿಕೆಟಿಗರಲ್ಲೂ ಕ್ರೇಝ್ ಹುಟ್ಟಿಸಿದೆ. ಜೂ.16ರ ಇಂಡೋ-ಪಾಕ್ ಹೋರಾಟಕ್ಕೆ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಕೂಡ ಕಾತರದಿಂದ ಕಾಯುತ್ತಿದ್ದಾರೆ. ವಿಶೇಷ ಅಂದರೆ ಬದ್ಧವೈರಿಗಳ ಕದನಕ್ಕೆ ಗೇಲ್ ವಿಶೇಷ ಉಡುಪನ್ನು ರೆಡಿ ಮಾಡಿದ್ದಾರೆ.

ಇದನ್ನೂ ಓದಿ: ಇಂಡೋ-ಪಾಕ್ ಫೈಟ್: ಮಳೆ ಬರುತ್ತಾ..? ಇಲ್ಲಿದೆ ನೋಡಿ ಹವಾಮಾನ ವರದಿ

ಕೊನೆಯ ವಿಶ್ವಕಪ್ ಟೂರ್ನಿ ಆಡುತ್ತಿರುವ ಕ್ರಿಸ್ ಗೇಲ್, ಐಪಿಎಲ್ ಟೂರ್ನಿ ಮೂಲಕ ಭಾರತೀಯ ಅಭಿಮಾನಿಗಳಿಗೆ ಹೆಚ್ಚು ಹತ್ತಿರವಾಗಿದ್ದಾರೆ. ಇನ್ನು ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲೂ  ಗೇಲ್ ಪಾಲ್ಗೊಂಡಿದ್ದಾರೆ. ಹೀಗಾಗಿ ಕ್ರಿಸ್ ಗೇಲ್ ಭಾರತದ ತ್ರಿವರ್ಣ ಧ್ವಜ ಹಾಗೂ ಪಾಕಿಸ್ತಾನ ಧ್ವಜವಿರುವು ಉಡುಪು ಧರಿಸಿದ್ದಾರೆ. ಈ ಮೂಲಕ ಎರಡು ತಂಡಕ್ಕೆ ಗೇಲ್ ಬೆಂಬಲ ಸೂಚಿಸಿದ್ದಾರೆ. 

 

ಇದನ್ನೂ ಓದಿ: ಇಂಡೋ-ಪಾಕ್ ವಿಶ್ವಕಪ್ ಪಂದ್ಯದ 5 ಅವಿಸ್ಮರಣೀಯ ಘಟನೆ!

ಕ್ರಿಸ್ ಗೇಲ್ ಸ್ಪೆಷಲ್ ಡ್ರೆಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಳಿ ಬ್ಲೇಜರ್ ಮೇಲೆ ಬಲಭಾಗದಲ್ಲಿ ಭಾರತದ ಧ್ಜಜ ಹಾಗೂ ಎಡ ಭಾಗದಲ್ಲಿ ಪಾಕ್ ಧ್ವಜ ಚಿತ್ರವಿದೆ. ಈ ಡ್ರೆಸ್ ಹುಟ್ಟು ಹಬ್ಬದ ಪಾರ್ಟಿಗೂ ಬಳಸುತ್ತೇನೆ ಎಂದಿದ್ದಾರೆ.