ಇಂಡೋ-ಆಫ್ಘಾನ್ ಪಂದ್ಯ- ಅಜರುದ್ದೀನ್ ದಾಖಲೆ ಸರಿಗಟ್ಟಿದ ಕೊಹ್ಲಿ!

 ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಹಾಫ್ ಸೆಂಚುರಿ ಸಿಡಿಸಿದ ವಿರಾಟ್ ಕೊಹ್ಲಿ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ದಾಖಲೆ ಸರಿಗಟ್ಟಿದ್ದಾರೆ. ಕೊಹ್ಲಿ ದಾಖಲೆ ವಿವರ ಇಲ್ಲಿದೆ.

Virat kohli equals Mohammad Azharuddin consecutive 50 plus records in world cup  2019

ಸೌಥಾಂಪ್ಟನ್(ಜೂ.22): ಅಫ್ಘಾನಿಸ್ತಾನ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಭಾರತ ರನ್ ಗಳಿಸಲು ಪರದಾಡಿದೆ. ಆದರೆ ನಾಯಕ ವಿರಾಟ್ ಕೊಹ್ಲಿ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಈ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪದರ್ಶನ ನೀಡುತ್ತಿರುವ ಕೊಹ್ಲಿ, ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ದಾಖಲೆ ಸರಿಗಟ್ಟಿದ್ದಾರೆ.  

ಇದನ್ನೂ ಓದಿ: ಪಾಕ್‌ಗಿಂತ ನಾವೇ ಬೆಸ್ಟ್ ಎಂದ ಆಫ್ಘನ್‌ಗೆ ಅಖ್ತರ್ ಹೇಳಿದ್ದೇನು..?

ಅಫ್ಘಾನ್ ವಿರುದ್ಧ ಕೊಹ್ಲಿ 67 ರನ್ ಸಿಡಿಸಿ ಔಟಾದರು. ಈ ಮೂಲಕ ಈ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಕೊಹ್ಲಿ ಸತತ 3ನೇ ಬಾರಿ 50  ಪ್ಲಸ್ ಸ್ಕೋರ್ ಮಾಡಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಸತತ 3 ಬಾರಿ 50 ಪ್ಲಸ್ ಸ್ಕೋರ್ ಮಾಡಿದ್ದರು. ಇದೀಗ ಕೊಹ್ಲಿ ಕೂಡ ಈ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: ಪಾಕ್ ನಾಯಕನನ್ನು ಅವಮಾನಿಸಿ ಕ್ಷಮೆ ಕೇಳಿದ ಅಭಿಮಾನಿ!

ಸೌತ್ ಆಫ್ರಿಕಾ ವಿರುದ್ಧ ಕೊಹ್ಲಿ 18 ರನ್ ಸಿಡಿಸಿ ಔಟಾಗಿದ್ದರು. ಆದರೆ ಆಸ್ಟ್ರೇಲಿಯಾ ವಿರುದ್ಧ 82 ಹಾಗೂ ಪಾಕಿಸ್ತಾನ ವಿರುದ್ದ 77 ರನ್ ಸಿಡಿಸಿದ್ದರು. ಇದೀಗ ಅಫ್ಘಾನ್ ವಿರುದ್ದ 67 ರನ್ ದಾಖಲಿಸಿದ್ದಾರೆ. ಇದು ವಿರಾಟ್ ಕೊಹ್ಲಿಯ 52ನೇ ಏಕದಿನ ಅರ್ಧಶತಕವಾಗಿದ್ದು, ಈ ವರ್ಷದಲ್ಲಿ ಸಿಡಿಸಿದ 4ನೇ ಹಾಫ್ ಸೆಂಚುರಿಯಾಗಿದೆ.
 

Latest Videos
Follow Us:
Download App:
  • android
  • ios