ಲಂಡನ್(ಜೂ.22): ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ಧದ ಸೋಲಿನಿಂದ ಪಾಕಿಸ್ತಾನ ತೀವ್ರ ಟೀಕೆಗೆ ಗುರಿಯಾಗಿದೆ. ಫಾರ್ಮ್, ಫಿಟ್ನೆಸ್ ಸೇರಿದಂತೆ ಹೆಜ್ಜೆ ಹೆಜ್ಜೆಗೂ ಪಾಕ್ ಕ್ರಿಕೆಟಿಗರು ಟೀಕೆ ಎದುರಿಸುತ್ತಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನ ನಾಯಕ ಸರ್ಫರಾಜ್ ಅಹಮ್ಮದ್ ವಿರುದ್ದ ಅಭಿಯಾನಗಳೇ ನಡೆಯುತ್ತಿದೆ. ಪಾಕ್ ಅಭಿಮಾನಿಯೋರ್ವ ಸರ್ಫರಾಜ್‌ಗೆ ಅವಮಾನ ಮಾಡಿ ಇದೀಗ ಕ್ಷಮೆ ಕೇಳಿದ್ದಾನೆ.

ಇದನ್ನೂ ಓದಿ: ಇಂಡೋ-ಪಾಕ್ ಪಂದ್ಯ- ಕ್ರೀಡಾಂಗಣದಲ್ಲಿ ಗೆಳತಿಗೆ ಪ್ರಪೋಸ್ ಮಾಡಿದ ಅಭಿಮಾನಿ!

ಭಾರತ ವಿರುದ್ದದ ಪಂದ್ಯದ ಬಳಿಕ ಪಾಕಿಸ್ತಾನ ನಾಯಕ ಸರ್ಫರಾಜ್ ಅಹಮ್ಮದ್ ಕುಟುಂಬದ ಜೊತೆ ಶಾಪಿಂಗ್ ಮಾಲ್ ತೆರಳಿದ್ದಾರೆ. ಮಗನೊಂದಿಗೆ ತೆರಳುತ್ತಿದ್ದ ವೇಳೆ ಪಾಕ್ ಅಭಿಮಾನಿ, ಸರ್ಫರಾಜ್‌ನನ್ನು ಕರೆದು ಫಿಟ್ನೆಸ್ ಕುರಿತು ಅವಮಾನ ಮಾಡಿದ್ದಾನೆ. ಸರ್ಫರಾಜ್ ಹೆಸರು ಕೂಗಿ ಕೂಗಿ ಅವಮಾನ ಮಾಡಿದ್ದಾನೆ. ಆದರೆ ಸರ್ಫರಾಜ್ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ.

 

ಇದನ್ನೂ ಓದಿ: ನಾವ್ ಮನೆಗೆ ಹೋಗೋದಿಲ್ಲ : ಪಾಕ್ ಕ್ರಿಕೆಟಿಗರು ಕಂಗಾಲು

ಪಾಕ್ ಅಭಿಮಾನಿ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸೋಲು ಗೆಲುವು ಸಹಜ. ಆದರೆ ಪಾಕ್ ನಾಯಕನನ್ನು ಈ ರೀತಿ ಅವಮಾನಿಸುವುದು ಸರಿಯಲ್ಲ ಎಂದು ವಿಶ್ವದಲ್ಲೆಡೆ ಆಕ್ರೋಶ ವ್ಯಕ್ತಪಡಿಸಿದ್ದರು. ಭಾರೀ ಟೀಕೆ ಕೇಳಿಬಂದ ಬೆನ್ನಲ್ಲೇ ಅಭಿಮಾನಿ ವೀಡಿಯೋ ಮೂಲಕ ಕ್ಷಮೆ ಕೇಳಿದ್ದಾನೆ. ಆದರೆ ಪಾಕ್ ಅಭಿಮಾನಿಯನ್ನು ಬಂಧಿಸಲು ಆಗ್ರಹ ಕೇಳಿಬರುತ್ತಿದೆ.