ವಿಶ್ವಕಪ್ ಟೂರ್ನಿಯ ಕ್ಷಣ-ಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

ಲಂಡನ್(ಜು.03): ಟೀಂ ಇಂಡಿಯಾ ಕ್ರಿಕೆಟಿಗರ ಇಂಜುರಿಯಿಂದ ತಂಡದಲ್ಲಿ ಹಲವು ಬದಲಾವಣಗಳಾಗಿವೆ. ವಿಶೇಷವಾಗಿ ವಿಜಯ್ ಶಂಕರ್ ಇಂಜುರಿಯಿಂದಾಗಿ ಕನ್ನಡಿಗ  ಮಯಾಂಕ್ ಅಗರ್ವಾಲ್‌ಗೆ ಅವಕಾಶ ಸಿಕ್ಕಿದೆ. ಇದು ಹಲವರಿಗೆ ಆಶ್ಚರ್ಯ ತಂದಿದೆ. ಕಾರಣ ಇದುವರೆಗೆ ಅಂತಾರಾಷ್ಟ್ರೀಯ ಏಕದಿನ ಪಂದ್ಯ ಆಡದ  ಮಯಾಂಕ್‌ ಆಗರ್ವಾಲ್ ಆಯ್ಕೆ ಹೇಗಾಯ್ತು ಅನ್ನೋದೆ ಯಕ್ಷ ಪ್ರಶ್ನೆಯಾಗಿತ್ತು. ಮಯಾಂಕ್ ಆಯ್ಕೆ ಮಾಡಿದ್ದು ಬಿಸಿಸಿಐ ಆಯ್ಕೆ ಸಮಿತಿಯಲ್ಲ. ಬದಲಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ.

ಇದನ್ನೂ ಓದಿ: ವಿಶ್ವಕಪ್‌ನಿಂದ ಕಡೆಗಣನೆ; ಕ್ರಿಕೆಟ್‌ಗೆ ಅಂಬಾಟಿ ರಾಯುಡು ವಿದಾಯ

ವಿಜಯ್ ಶಂಕರ್ ಇಂಜುರಿಯಿಂದ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಅತ್ತ ಅಂಬಟಿ ರಾಯುಡು  ಬ್ಯಾಗ್ ಪ್ಯಾಕ್ ಮಾಡಿ ರೆಡಿಯಾಗಿದ್ದರು. ಆದರೆ ಆಯ್ಕೆ ಸಮಿತಿಯಿಂದ ರಾಯುಡುಗೆ ಫೋನ್ ಹೋಗಲೇ ಇಲ್ಲ. ರಾಯುಡು ಏನಾಯ್ತು ಎಂದು ಪರೀಕ್ಷಿಸುವಾಗ ಮಯಾಂಕ್ ಅಗರ್ವಾಲ್ ಇಂಗ್ಲೆಂಡ್ ತಲುಪಿದ್ದರು.

2 ಟೆಸ್ಟ್ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಮಯಾಂಕ್, ನಾಯಕ ಕೊಹ್ಲಿ  ಹಾಗೂ ಕೋಚ್ ರವಿ ಶಾಸ್ತ್ರಿ ಇಂಪ್ರೆಸ್ ಮಾಡಿದ್ದರು. 2018ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಭಾರತ, ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎ ಸರಣಿಯಲ್ಲಿ ಮಯಾಂಕ್ ಅದ್ಬುತ ಪ್ರದರ್ಶನ ನೀಡಿದ್ದರು. ಈ ಎರಡು ಪ್ರದರ್ಶನ ಮಯಾಂಕ್ ಆಗರ್ವಾಲ್‌ಗೆ ವಿಶ್ವಕಪ್ ಸೀಟು ಗಿಟ್ಟಿಸಿಕೊಟ್ಟಿದೆ. ಧವನ್ ಇಂಜುರಿ ಬದಲು ಕೆಎಲ್ ರಾಹುಲ್ ಆರಂಭಿಕನಾಗಿ ಕಣಕ್ಕಿಳಿದಿದ್ದಾರೆ. ಆದರೆ ರಾಹುಲ್ ಬಾಂಗ್ಲಾ ವಿರುದ್ಧದ ಪಂದ್ಯ ಹೊರತು ಪಡಿಸಿದರೆ ಇತರ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ತೋರಿಲ್ಲ. ಹೀಗಾಗಿ ಆರಂಭಿಕನ ಹುಡುಕಾಟದಲ್ಲಿದ್ದ ಕೊಹ್ಲಿ ಹಾಗಾ ಶಾಸ್ತ್ರಿಗೆ ಕಂಡಿದ್ದೇ ಮಯಾಂಕ್ ಅಗರ್ವಾಲ್. 

ಇದನ್ನೂ ಓದಿ: ಟೀಂ ಇಂಡಿಯಾ ಗೆಲುವಿಗೆ ಅಡ್ಡಿಯಾಗಿದ್ದ ಭಾರತೀಯನನ್ನೇ ತವರಿಗಟ್ಟಿದ ಬುಮ್ರಾ..?

ಮಯಾಂಕ್ ಅಗರ್ವಾಲ್‌ಗೆ ಆರಂಭಿಕನಾಗಿ ಬಡ್ತಿ ನೀಡಿ, ರಾಹುಲ್‌ಗೆ ನಾಲ್ಕನೇ ಕ್ರಮಾಂಕ ನೀಡೋ ಸಾಧ್ಯತೆ ಇದೆ. ಈ ಮೂಲಕ ಭಾರತದ ಆರಂಭಿಕ ಹಾಗೂ ಮಧ್ಯಮ ಕ್ರಮಾಂಕವನ್ನು ಬಲಪಡಿಸಲು ಟೀಂ ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ಇತ್ತ ಮಯಾಂಕ್ ಆಯ್ಕೆಯಿಂದ ಬೇಸತ್ತ ಅಂಬಾಟಿ ರಾಯುಡು ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದರೊಂದಿಗೆ ಶಂಕರ್ ಇಂಜುರಿ ಕುರಿತು ಅನುಮಾನಗಳು ಕಾಡತೊಡಗಿದೆ.

ವಿಜಯ್ ಶಂಕರ್ ಇಂಜುರಿಯಿಂದ ಚೇತರಿಸಿಕೊಂಡು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯ ಆಡಿದ್ದಾರೆ. ಹೀಗಾಗಿ ಆಯ್ಕೆ ಸಮಿತಿ ಸೆಲೆಕ್ಟ್ ಮಾಡಿದ ಶಂಕರ್‌ಗೆ ಇಂಜುರಿ ನೆಪ ಒಡ್ಡಿ ಹೊರದಬ್ಬಲಾಗಿದೆ. ಇಷ್ಟೇ ಅಲ್ಲ ಕೊಹ್ಲಿ ಹಾಗೂ ಶಾಸ್ತ್ರಿ ಆಯ್ಕೆ ಸಮಿತಿಯನ್ನು ಲೆಕ್ಕಿಸಿದ ತಮಿಗಿಷ್ಟ ಬಂದ ಆಟಗಾರನನ್ನು ಆಯ್ಕೆ ಮಾಡಿದ್ದಾರೆ ಅನ್ನೋ ಆರೋಪವೂ ಇದೆ. ಆದರೆ ಪ್ರತಿಭಾನ್ವಿತ ಮಯಾಂಕ್ ಅಗರ್ವಾಲ್ ಆಯ್ಕೆ ಸೂಕ್ತ ಅನ್ನೋದು ಕ್ರಿಕೆಟ್ ಪಂಡಿತರ ಮಾತು.