ಹೈದರಾಬಾದ್(ಜು.03): ವಿಶ್ವಕಪ್ ಟೂರ್ನಿಯಿಂದ ಕಡೆಗಣಿಸಿದ ಟೀಂ ಇಂಡಿಯಾ ಕ್ರಿಕೆಟಿಗ ಅಂಬಟಿ ರಾಯುಡು ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಅಂತಾರಾಷ್ಟ್ರೀಯ, ದೇಸಿ ಹಾಗೂ ಐಪಿಎಲ್ ಟೂರ್ನಿಗೂ ರಾಯುಡು ವಿದಾಯ ಘೋಷಿಸಿದ್ದಾರೆ ಎಂದು ಬಿಸಿಸಿಐ ಮೂಲಗಳು ಹೇಳಿದೆ.

ಇದನ್ನೂ ಓದಿ: 3ಡಿ ಗ್ಲಾಸ್ ಬದಿಗಿಟ್ಟು ಓದಿ- ಅಂಬಾಟಿಗೆ ಐಸ್‌ಲೆಂಡ್ ಕ್ರಿಕೆಟ್ ಮನವಿ !

ವಿಶ್ವಕಪ್ ಸ್ಟಾಂಡ್ ಬೈ ಲಿಸ್ಟ್‌ನಲ್ಲಿ ಅಂಬಾಟಿ ರಾಯುಡು ಹೆಸರಿದ್ದರೂ ಆಯ್ಕೆ ಸಮಿತಿ ರಾಯುಡು ಕಡೆ ಮುಖ ಮಾಡಿಲ್ಲ. ಇಂಜುರಿಗೆ ತುತ್ತಾಗಿದ್ದ ವಿಜಯ್ ಶಂಕರ್ ಬದಲು ಮಯಾಂಕ್ ಅಗರ್ವಾಲ್‌ಗೆ ಸ್ಥಾನ ನೀಡಲಾಗಿದೆ. ಇದು ರಾಯುಡುವನ್ನು ಮತ್ತಷ್ಟು ಕೆರಳಿಸಿದೆ. ಕಾರಣ ವಿಶ್ವಕಪ್ ತಂಡದ ಆಯ್ಕೆ ವೇಳೆ ರಾಯುಡು ಬದಲು ವಿಜಯ್ ಶಂಕರ್‌ಗೆ ಸ್ಥಾನ ನೀಡಲಾಗಿತ್ತು. ಇಷ್ಟೇ ಅಲ್ಲ 3 ಡೈಮೆನ್ಶನ್ ಆಟಗಾರನಾಗಿ ವಿಜಯ್ ಶಂಕರ್‌ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ಹೇಳಿತ್ತು.

ಇದನ್ನೂ ಓದಿ: ಅಯ್ಯೋ ಪಾಪ: ಟ್ವೀಟ್ ಮಾಡಿ ಕೆಟ್ಟ ರಾಯುಡು!

ಈ ಘಟನೆಯಿಂದ ರೊಚ್ಚಿಗೆದ್ದ ರಾಯುಡು ವಿಶ್ವಕಪ್ ಪಂದ್ಯ ನೋಡಲು 3ಡಿ ಗ್ಲಾಸ್ ಖರೀದಿಸಿದ್ದೇನೆ ಎಂದು ಟ್ವೀಟ್ ಮಾಡಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದರು. ಇದಾದ ಬಳಿಕ ಬಿಸಿಸಿಐ ರಾಯುಡುವನ್ನು ಕಡೆಗಣಿಸಿದೆ. ಕಾರಣ ಇಂಜುರಿಗೊಂಡು ಶಿಖರ್ ಧವನ್ ಹೊರಬಿದ್ದಾಗ ರಿಷಬ್ ಪಂತ್‌ಗೆ ಮಣೆ ಹಾಕಲಾಗಿತ್ತು. ಬಳಿಕ ಶಂಕರ್ ಬದಲು ಮಯಾಂಕ್ ಅಗರ್ವಾಲ್‌ಗೆ ಅವಕಾಶ ನೀಡಲಾಗಿತ್ತು. ಇದರಿಂದ ರೋಸಿ ಹೋದ ಅಂಬಾಟಿ ರಾಯುಡು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ ಎಂದು ಬಿಸಿಸಿಐ ಮೂಲಗಳು ಹೇಳಿದೆ. 

 

ಹೈದರಾಬಾದ್ ಕ್ರಿಕೆಟ್ ಸಂಸ್ಥೆಗೆ ರಾಯುಡು ವಿದಾಯದ ಪತ್ರ ರವಾನಿಸಿದ್ದಾರೆ. ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಈ ಪತ್ರವನ್ನು ಬಿಸಿಸಿಐಗೆ ರವಾನಿಸಿದೆ. ಆತುರದ ನಿರ್ಧಾರ ಉತ್ತಮವಲ್ಲ,ತಾಳ್ಮೆಯಿಂದ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ ಎಂದು ಹೈದರಾಬಾದ್ ಕ್ರಿಕೆಟ್ ಸಂಸ್ಥೆ ರಾಯುಡುಗೆ ಕಿವಿ ಮಾತು ಹೇಳಿದೆ ಅನ್ನೋ ಮಾತುಗಳು ಕೇಳಿಬಂದಿದೆ.