ವಿಶ್ವಕಪ್ ಟೂರ್ನಿಯ ಕ್ಷಣ-ಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

ಬೆಂಗಳೂರು[ಜು.02]: ಟೀಂ ಇಂಡಿಯಾ ಆಲ್ರೌಂಡರ್ ವಿಜಯ್ ಶಂಕರ್ ಕಾಲ್ಬೆರಳಿನ ಗಾಯದಿಂದಾಗಿ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ಇದೀಗ ಕನ್ನಡಿಗ ಮಯಾಂಕ್ ಅಗರ್‌ವಾಲ್ ತಂಡ ಕೂಡಿಕೊಂಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಮತ್ತೊಮ್ಮೆ ಬುಮ್ರಾ ಎಸೆತದಲ್ಲಿ ಕಾಲಿಗೆ ಗಾಯ ಮಾಡಿಕೊಂಡ ವಿಜಯ್ ಶಂಕರ್ ಇದೀಗ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದಿಂದಲೇ ಹೊರಬಿದ್ದಿದ್ದಾರೆ. ನಾಲ್ಕನೇ ಕ್ರಮಾಂಕಕ್ಕೆ ಅಂಬಟಿ ರಾಯುಡು ಬದಲಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ವಿಜಯ್ ಶಂಕರ್ ಟೂರ್ನಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ವಿಜಯ್ ಶಂಕರ್ ಈ ವಿಶ್ವಕಪ್ ಟೂರ್ನಿಯಲ್ಲಿ[58 ರನ್, 2ವಿಕೆಟ್] ನೀರಸ ಪ್ರದರ್ಶನ ತೋರಿದ್ದರಿಂದ ಇಂಗ್ಲೆಂಡ್ ವಿರುದ್ಧದ ಪಂದ್ಯದಿಂದ ಕೈಬಿಡಲಾಗಿತ್ತು.  

ವಿಶ್ವಕಪ್ ಟೂರ್ನಿಯಿಂದ ವಿಜಯ್ ಶಂಕರ್ ಔಟ್; ಮಯಾಂಕ್ ಅಗರ್‌ವಾಲ್‌ಗೆ ಚಾನ್ಸ್..?

ವಿಜಯ್ ಶಂಕರ್ ತಂಡದಿಂದ ಹೊರಬೀಳುತ್ತಿದ್ದಂತೆ ಟ್ವಿಟರಿಗರು ಸಾಕಷ್ಟು ಪರ-ವಿರೋಧಗಳ ಟ್ವೀಟ್ ಮಾಡಿದ್ದಾರೆ. ಅದರಲ್ಲೂ ಒಬ್ಬ ವ್ಯಕ್ತಿ, ಭಾರತದ ವಿಶ್ವಕಪ್ ಗೆಲುವಿಗೆ ಅಡ್ಡಿಯಾಗುವ ಯಾವ ವ್ಯಕ್ತಿಯನ್ನು ಬುಮ್ರಾ ಉಳಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಮತ್ತೆ ಕೆಲವರು ಧೋನಿ ಹಾಗೂ ಕೇದಾರ್ ಜಾಧವ್ ಮೇಲೆ ಬುಮ್ರಾ ಯಾರ್ಕರ್ ಹಾಕಲಿ ಎಂದು ತಮಾಶೆ ಮಾಡಿದ್ದಾರೆ. ಉಳಿದ ಟ್ವಿಟರ್ ಪ್ರತಿಕ್ರಿಯೆಗಳು ಹೀಗಿವೆ ನೋಡಿ...