ವಿಶ್ವಕಪ್ ಟೂರ್ನಿಯ ಅರ್ಧ ಭಾಗ ಮುಕ್ತಾಯಗೊಂಡಿದೆ. ಇದೀಗ ರೋಚಕ ಘಟ್ಟ ತಲುಪಿರುವ ಟೂರ್ನಿಯಲ್ಲಿ ಯಾರು ಸೆಮಿಫೈನಲ್ ಪ್ರವೇಶಿಸಲಿದ್ದಾರೆ ಅನ್ನೋ ಕುತೂಹಲ ಇದೀಗ ಎಲ್ಲರಲ್ಲೂ ಮನೆ ಮಾಡಿದೆ. 

ಲಂಡನ್(ಜೂ.20): ವಿಶ್ವಕಪ್ ಟೂರ್ನಿ ರೋಚಕ ಘಟ್ಟ ತಲುಪಿದೆ. ಟೂರ್ನಿಯ ಅರ್ಧ ಭಾಗ ಮುಕ್ತಾಯಗೊಂಡಿದೆ. ಸದ್ಯ ಬಲಿಷ್ಠ ನ್ಯೂಜಿಲೆಂಡ್, ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳು ಆಂಕಪಟ್ಟಿಯ ಅಗ್ರಸ್ಥಾನದಲ್ಲಿದೆ. ಅಫ್ಘಾನಿಸ್ತಾನ, ಹಾಗೂ ಸೌತ್ ಆಫ್ರಿಕಾ ತಂಡದ ವಿಶ್ವಕಪ್ ಹೋರಾಟ ಬಹುತೇಕ ಅಂತ್ಯಗೊಂಡಿದೆ. ಇತ್ತ ಬಾಂಗ್ಲಾದೇಶ, ವೆಸ್ಟ್ ಇಂಡೀಸ್ , ಪಾಕಿಸ್ತಾನ ಹಾಗೂ ಶ್ರೀಲಂಕಾ ಕಠಿಣ ಹೋರಾಟ ನೀಡಿ ಟಾಪ್ 4 ಪಟ್ಟಿಯಲ್ಲಿ ಕಾಣಿಸಿಕೊಳ್ಳೋ ಪ್ರಯತ್ನದಲ್ಲಿದೆ. ಹೀಗಾಗಿ ಸೆಮಿಫೈನಲ್ ಪ್ರವೇಶಿಸೋ ತಂಡ ಯಾವುದು ಅನ್ನೋ ಕುತೂಹಲ ಈಗ ಹೆಚ್ಚಾಗಿದೆ.

ಇದನ್ನೂ ಓದಿ: ಧವನ್ ಬೆನ್ನಲ್ಲೇ ಅಲ್ರೌಂಡರ್ ವಿಜಯ್ ಶಂಕರ್‌ಗೆ ಗಾಯ- ಆತಂಕದಲಲ್ಲಿ ತಂಡ!

ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವು 4 ತಂಡಗಳೇ ಸೆಮಿಪೈನಲ್‌ಗೆ ಲಗ್ಗೆ ಇಡಲಿವೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಸದ್ಯ ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್, ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ಭಾರತ ಕ್ರಮವಾಗಿ ಸ್ಥಾನ ಹಂಚಿಕೊಂಡಿದೆ. ಇವೇ ತಂಡಗಳು ಸೆಮಿಫೈನಲ್ ಪ್ರವೇಶಿಸಲಿದೆ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಿಶ್ವಕಪ್‌ಗೆ ಮಳೆ ಅಡ್ಡಿ: ವಿಮಾ ಸಂಸ್ಥೆಗೆ ಭಾರಿ ನಷ್ಟ!

ನ್ಯೂಜಿಲೆಂಡ್ ಸೋಲಿಲ್ಲದ ಸರದಾನಾಗಿ ಮುನ್ನಗ್ಗುತ್ತಿದೆ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಕೇವಲ 1 ಪಂದ್ಯ ಸೋತಿದೆ. ಇನ್ನು ಟೀಂ ಇಂಡಿಯಾ ಗೆಲುವಿನೊಂದಿಗೆ 4ನೇ ಸ್ಥಾನದಲ್ಲಿದೆ. ಹೀಗಾಗಿ ಈ ನಾಲ್ಕು ತಂಡಗಳೇ ಬಹುತೇಕ ಸೆಮಿಫೈನಲ್ ಪ್ರವೇಶಿಸಲಿವೆ. ಆದರೆ ಕೊನೆಯ ಕ್ಷಣದವರೆಗೂ ಯಾವುದು ಖಚಿತವಲ್ಲ. ಒಂದು ಫಲಿತಾಂಶ ತಂಡದ ಹಣೆಬರಹವನ್ನೇ ಬದಲಿಸಲಿದೆ.