ಲಂಡನ್(ಜೂ.20): ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ಗಾಯದಿಂದ ಚೇತರಿಸಿಕೊಳ್ಳದ ಕಾರಣ ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಈ ಆಘಾತವನ್ನೇ ಟೀಂ ಇಂಡಿಯಾ ಇನ್ನು ಅರಗಿಸಿಕೊಂಡಿಲ್ಲ. ಇದರ ಬೆನ್ನಲ್ಲೇ ಮತ್ತೊಬ್ಬ  ಕ್ರಿಕೆಟಿಗ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. ಇದೀಗ ಟೀಂ ಇಂಡಿಯಾದಲ್ಲಿ ಗಾಯದ ಪಟ್ಟಿ ಬೆಳೆಯುತ್ತಲೇ ಇದೆ.

ಇದನ್ನೂ ಓದಿ: ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಧವನ್ ಭಾವನಾತ್ಮಕ ಸಂದೇಶ

ಟೀಂ ಇಂಡಿಯಾ ಅಲ್ರೌಂಡರ್ ವಿಜಯ್ ಶಂಕರ್ ಇಂಜುರಿಯಾಗಿದ್ದಾರೆ. ಅಭ್ಯಾಸದ ವೇಳೆ ವಿಜಯ್ ಶಂಕರ್ ತುದಿಗಾಲಿಗೆ ಚೆಂಡು ಬಿದ್ದ ಇಂಜುರಿಯಾಗಿದ್ದಾರೆ. ತಕ್ಷಣವೇ ವಿಜಯ್ ಶಂಕರ್ ಅಭ್ಯಾಸ ಅರ್ಧಕ್ಕೆ ಮೊಟಕುಗೊಳಿಸಿ ಹೊರ ನಡೆದಿದ್ದಾರೆ. ಅಫ್ಘಾನಿಸ್ತಾನ ವಿರುದ್ದದ ಪಂದ್ಯಕ್ಕೂ ಮುನ್ನ ವಿಜಯ್ ಶಂಕರ್ ಕೂಡ ಗಾಯದ ಸಮಸ್ಯಗೆ ತುತ್ತಾಗಿರೋದು  ತಂಡದ ಆತಂಕ ಹೆಚ್ಚಿಸಿದೆ.

ಇದನ್ನೂ ಓದಿ: ಇಂಡೋ-ಪಾಕ್ ಪಂದ್ಯ: ಗಾಯಗೊಂಡ ಭುವನೇಶ್ವರ್ ಔಟ್!

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಇಂಜುರಿಯಾಗಿ ಹೊರ ನಡೆದಿದ್ದಾರೆ. ಸದ್ಯ ಚೇತರಿಸಿಕೊಳ್ಳುತ್ತಿರುವ ಭುವಿ, ಮುಂದಿನ ಪಂದ್ಯಗಳಿಗೆ ಲಭ್ಯತೆ ಕುರಿತು ಇನ್ನು ಯಾವುದೇ ಖಚಿತತೆ ಇಲ್ಲ. ಪಾಕ್ ವಿರುದ್ಧದ  ಪಂದ್ಯದಲ್ಲಿ ಭುವಿ ಇಂಜುರಿಯಾಗಿ ಹೊರನಡೆಯುತ್ತಿದ್ದಂತೆ ಭುವನೇಶ್ವರ್ ಓವರ್ ಮುಗಿಸಲು ಬಂದ ವಿಜಯ್ ಶಂಕರ್ ವಿಕೆಟ್ ಕಬಳಿಸಿ ತಂಡಕ್ಕೆ ಭರ್ಜರಿ ಯಶಸ್ಸು ತಂದುಕೊಟ್ಟಿದ್ದರು. ಇದೀಗ ಭುವಿ, ಶಿಖರ್ ಧವನ್ ಬೆನ್ನಲ್ಲೇ ವಿಜಯ್ ಶಂಕರ್ ಕೂಡ ಇಂಜುರಿಗೆ ತುತಾಗಿರೋದು ತಂಡದ ಸಮತೋಲನಕ್ಕೆ ಧಕ್ಕೆಯಾಗಲಿದೆ.