ಮುಂಬೈ[ಜೂ.20]: ಐಸಿಸಿ ಏಕದಿನ ವಿಶ್ವಕಪ್ ಪಂದ್ಯಗಳಿಗೆ ಮಳೆ ಅಡ್ಡಿಪಡಿಸುತ್ತಿರುವ ಕಾರಣ, ಭಾರತೀಯ ವಿಮಾ ಸಂಸ್ಥೆಗಳಿಗೆ ಸುಮಾರು ₹150-180 ಕೋಟಿ ನಷ್ಟವಾಗಲಿದೆ ಎಂದು ವರದಿಯೊಂದು ತಿಳಿಸಿದೆ. 

ಮಳೆಯಿಂದ ಪಂದ್ಯ ರದ್ದು- 2019ರ ವಿಶ್ವಕಪ್‌ನಲ್ಲಿ ದಾಖಲೆ!

ಪಂದ್ಯಗಳ ಪ್ರಸಾರ ಹಕ್ಕು ಪಡೆಯಲು ವಾಹಿನಿ ಐಸಿಸಿಗೆ ದೊಡ್ಡ ಮೊತ್ತ ಪಾವತಿಸಿದ್ದು, ಪಂದ್ಯಗಳು ಮಳೆಯಿಂದಾಗಿ ರದ್ದಾದರೆ ಜಾಹೀರಾತು ಹಣ ನಷ್ಟವಾಗಲಿದೆ. ನಷ್ಟ ಭರಿಸಲು ವಾಹಿನಿ ವಿಮೆ ಮಾಡಿಸಿದ್ದು, ಇದೀಗ ವಿಮಾ ಸಂಸ್ಥೆ ನಷ್ಟ ತುಂಬಿಕೊಡಬೇಕಿದೆ. ಈ ವಿಶ್ವಕಪ್‌ನಲ್ಲಿ ಈಗಾಗಲೇ 3 ಪಂದ್ಯಗಳು ಟಾಸ್ ಕೂಡಾ ಕಾಣದೆ ರದ್ದಾಗಿವೆ.

ಸಾಮಾನ್ಯ ಪಂದ್ಯಗಳು ರದ್ದಾದರೆ ಸರಿಸುಮಾರು 60 ಕೋಟಿ ರುಪಾಯಿ ನಷ್ಟವಾಗುತ್ತದೆ. ಇನ್ನು ಸೆಮಿಫೈನಲ್ ಇಲ್ಲವೇ ಫೈನಲ್ ಪಂದ್ಯಗಳು ಮಳೆಯಿಂದ ಹಾನಿಗೊಳಗಾದರೆ 70-80 ಕೋಟಿ ರುಪಾಯಿ ನಷ್ಟವಾಗುತ್ತದೆ ಎಂದು ವಿಮಾ ಸಂಸ್ಥೆಗಳು ಅಂದಾಜು ಮಾಡಿವೆ.