ಬರ್ಮಿಂಗ್‌ಹ್ಯಾಮ್(ಜು.02): ಭಾರತ ಹಾಗೂ ಬಾಂಗ್ಲಾದೇಶ ನಡುವಿನ ವಿಶ್ವಕಪ್ ಲೀಗ್ ಪಂದ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಅಭಿಮಾನಿಯ ಉತ್ಸಾಹ ಇದೀಗ ಟ್ರೆಂಡ್ ಆಗಿದೆ. ಭಾರತದ ಬ್ಯಾಟಿಂಗ್ ವೇಳೆ ಕ್ಯಾಮಾರಮ್ಯಾನ್  ಪತ್ತೆ ಹಚ್ಚಿದ ಅಭಿಮಾನಿಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. 

ಇದನ್ನೂ ಓದಿ: 3ಡಿ ಗ್ಲಾಸ್ ಬದಿಗಿಟ್ಟು ಓದಿ- ಅಂಬಾಟಿಗೆ ಐಸ್‌ಲೆಂಡ್ ಕ್ರಿಕೆಟ್ ಮನವಿ !

ಭಾರತದ ಅಭಿಮಾನಿಯಾಗಿರುವ ಈ ಅಜ್ಜಿ ಇಳಿವಯಸ್ಸಿನಲ್ಲೂ ಟೀಂ ಇಂಡಿಯಾಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಯುವಕರನ್ನು ನಾಚಿಸುವ ರೀತಿಯಲ್ಲಿ ಭಾರತ ತಂಡಕ್ಕೆ ಬೆಂಬಲ ನೀಡುತ್ತಿದ್ದಾರೆ. ರಿಷಬ್ ಪಂತ್ ಬೌಂಡರಿ ಸಿಡಿಸಿದ ವೇಳೆ ಕ್ಯಾಮಾರಮ್ಯಾನ್ ವಿಶೇಷ ಅಭಿಮಾನಿಯನ್ನು ಪತ್ತೆ ಹಚ್ಚಿದ್ದಾರೆ.