ಕಾರ್ಡಿಫ್(ಜೂ.15): ವಿಶ್ವಕಪ್ ಟೂರ್ನಿಯಲ್ಲಿ ಈಗಾಗಲೇ 4 ಪಂದ್ಯ ಆಡಿದ್ದರೂ ಇದುವರೆಗೆ ಗೆಲುವು ಕಾಣದ ಸೌತ್ ಆಫ್ರಿಕಾ ತಂಡದ ಟೈಂ ಸರಿಯಾಗಿಲ್ಲ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಿಂದ ತಂಡದ ಸೋಲಿನ ಸರಮಾಲೆ ಅಂತ್ಯವಾಗಲಿದೆ ಅನ್ನೋ ವಿಶ್ವಾಸ ಸೌತ್ಆಫ್ರಿಕಾ ತಂಡದಲ್ಲಿತ್ತು. ಆದರೆ ಪಂದ್ಯ ಆರಂಭಗೊಂಡ 20 ಓವರ್‌ಗಳಾಗುವಷ್ಟರಲ್ಲೇ ಮಳೆಯಿಂದ ಪಂದ್ಯ ಸ್ಥಗಿತಗೊಂಡಿದೆ.ಈ ಮೂಲಕ ಈ ಪಂದ್ಯವೂ ರದ್ದಾಗೋ ಭೀತಿಯಲ್ಲಿದೆ.

ಇದನ್ನೂ ಓದಿ: ಇಂಡೋ-ಪಾಕ್ ಪಂದ್ಯಕ್ಕೆ ಕ್ರಿಸ್ ಗೇಲ್ ಸ್ಪೆಷಲ್ ಡ್ರೆಸ್ - ಯಾರಿಗೆ ಬೆಂಬಲ?

ಅಫ್ಘಾನಿಸ್ತಾನ ವಿರುದ್ಧ ಟಾಸ್ ಗೆದ್ದ ಸೌತ್ ಆಫ್ರಿಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಇಳಿದ ಅಫ್ಘಾನಿಸ್ತಾನ ಡೀಸೆಂಟ್ ಆರಂಭ ಪಡೆಯಿತು. ಹಝ್ರತುಲ್ಹಾ ಜಝೈ 22 ರನ್ ಕಾಣಿಕೆ ನೀಡಿದರು. ಆದರೆ ರಹಮತ್ ಶಾ ಕೇವಲ 6 ರನ್ ಸಿಡಿಸಿ ಔಟಾದರು. ನೂರ್ ಆಲಿ ಝರ್ದಾನ್ ಆಫ್ಘಾನ್ ತಂಡಕ್ಕೆ ಚೇತರಿಕೆ ನೀಡಿದರು.

ಇದನ್ನೂ ಓದಿ: ಇಂಡೋ-ಪಾಕ್ ವಿಶ್ವಕಪ್ ಪಂದ್ಯದ 5 ಅವಿಸ್ಮರಣೀಯ ಘಟನೆ!

ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 69 ರನ್ ಸಿಡಿಸಿದಾಗ ಮಳೆ ಅಡ್ಡಿಯಾಯಿತು. ಹೀಗಾಗಿ ಪಂದ್ಯವನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಝರ್ದಾನ್ ಅಜೇಯ 32 ಹಾಗೂ ಹಶ್ಮುತುಲ್ಹಾ ಶಾಹಿದಿ ಅಜೇಯ 8 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಸದ್ಯ ಮಳೆ ಕಡಿಮೆಯಾಗುತ್ತಿದ್ದು ಪಂದ್ಯ ಪುನರ್ ಆರಂಭಗೊಳ್ಳೋ ಸಾಧ್ಯತೆ ಹೆಚ್ಚಿದೆ.