ಮ್ಯಾಂಚೆಸ್ಟರ್(ಜು.11): ಟೀಂ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾ ಹಾಗೂ ಮಾಜಿ ಕ್ರಿಕೆಟಿಗ, ಕಮೆಂಟೇಟರ್ ಸಂಜಯ್ ಮಂಜ್ರೇಕರ್ ನಡುವೆ ಟ್ವಿಟರ್ ಸಮರ ಇದೀಗ ತಾರ್ಕಿಕ ಅಂತ್ಯಕಾಣುವಂತಿದೆ. ಬಿಟ್ಸ್ ಅಂಡ್ ಪೀಸಸ್ ಎಂದು ಜಡೇಜಾ ಜರೆದಿದ್ದ  ಸಂಜಯ್ ಮಂಜ್ರೇಕರ್‌ ಇದೀಗ ಈ ಹೇಳಿಕೆ ಹಿಂಪಡೆಯುವಂತಾಗಿದೆ. ನ್ಯೂಜಿಲೆಂಡ್ ವಿರುದ್ದದ ಸೆಮಿಫೈನಲ್ ಪಂದ್ಯದಲ್ಲಿ ರವೀಂದ್ರ ಜಡೇಜಾ 77 ರನ್ ಸಿಡಿಸೋ ಮೂಲಕ ಮಂಜ್ರೇಕರ್‌ಗೆ ತಿರುಗೇಟು ನೀಡಿದ್ದರು. ಈ ಪದರ್ಶನ ಮಂಜ್ರೇಕರ್ ಹೇಳಿಕೆಯನ್ನೇ ಹಿಂಪೆಡೆಯುವಂತೆ ಮಾಡಿದೆ.

 

ಇದನ್ನೂ ಓದಿ: ವಿಶ್ವಕಪ್ 2019: ಪಂದ್ಯ ಸೋತರೂ ದಾಖಲೆ ಬರೆದ ರವೀಂದ್ರ ಜಡೇಜಾ!

ರವೀಂದ್ರ ಜಡೇಜಾ ಅದ್ಭುತ ಪ್ರದರ್ಶನ ನನ್ನ ಹೇಳಿಕೆಯನ್ನೇ ಹಿಂಪಡೆಯುವಂತೆ ಮಾಡಿದೆ. ಜಡೇಜಾ ಅಲ್ರೌಂಡರ್ ಪ್ರದರ್ಶನಕ್ಕೆ ತಲೆಬಾಗಲೇ ಬೇಕು ಎಂದು ಸಂಜಯ್ ಮಂಜ್ರೇಕರ್ ಮೊದಲ ಸೆಮಿಫೈನಲ್ ಪಂದ್ಯ ಮುಗಿದ ಬಳಿಕ ಹೇಳಿದರು. ಇಷ್ಟೇ ಅಲ್ಲ ಜಡೇಜಾ ಬ್ಯಾಟಿಂಗ್ ಕುರಿತು ಮಂಜ್ರೇಕರ್ ಟ್ವೀಟ್  ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದರು. 

 

ಇದನ್ನೂ ಓದಿ: ಜಡೇಜಾ ಮಾತಿನೇಟು: ಸಂಜಯ್ ಮಂಜ್ರೇಕರ್‌ಗೆ ಬೇಕಿತ್ತಾ ಇದು..?

ಸಂಜಯ್ ಮಂಜ್ರೇಕರ್ ನಡುವಿನ ಗುದ್ದಾಟಕ್ಕೆ ರವೀಂದ್ರ ಜಡೇಜಾ ಟ್ವೀಟ್ ಮೂಲಕ ಮಾತ್ರವಲ್ಲ, ಪ್ರದರ್ಶನದ ಮೂಲಕವೂ ತಿರುಗೇಟು ನೀಡಿದ್ದಾರೆ. ಇವರಿಬ್ಬರ ಸಮರಕ್ಕೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಆದರೆ  ಈ ಸಮರ ಮುಂದುವರಿಯು ಸಾಧ್ಯತೆ ದಟ್ಟವಾಗಿ  ಗೋಚರಿಸುತ್ತಿದೆ.