ಮ್ಯಾಂಚೆಸ್ಟರ್(ಜು.11): ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಮುಗ್ಗರಿಸಿ ಟೂರ್ನಿಯಿಂದ ಹೊರಬಿದ್ದಿರುವ ಟೀಂ ಇಂಡಿಯಾಗೆ ಮತ್ತೊಂದು ಆಘಾತ ಎದುರಾಗಿದೆ. ಟೀಂ ಇಂಡಿಯಾ ಸಹಾಯಕ ಸಿಬ್ಬಂಧಿ, ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್ ವಿದಾಯ ಹೇಳಿದ್ದಾರೆ. ಕಳೆದ 4 ವರ್ಷಗಳಿಂದ ಟೀಂ ಇಂಡಿಯಾ ಕ್ರಿಕೆಟಿಗರ ಇಂಜುರಿ ಸೇರಿದಂತೆ ಯಾವುದೇ  ಸಮಸ್ಯೆಗಳಿಗೆ ಮಿಂಚಿನ ಪರಿಹಾರ ನೀಡಿದ್ದ ಫಿಸಿಯೋಥೆರಪಿಸ್ಟ್ ಪ್ಯಾಟ್ರಿಕ್  ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. 

ಇದನ್ನೂ ಓದಿ: ಧೋನಿ ರನೌಟ್; ಅಂಪೈರ್ ತಪ್ಪಿಗೆ ಬಲಿಯಾಯ್ತಾ ಟೀಂ ಇಂಡಿಯಾ?

ಟೀಂ ಇಂಡಿಯಾದಲ್ಲಿ ನನ್ನ ಕೊನೆಯ ದಿನ ನಿರೀಕ್ಷಿತ ಫಲಿತಾಂಶ ಬರಲಿಲ್ಲ.  ನನಗೆ ಅವಕಾಶ ನೀಡಿ,ಕಳೆದ 4 ವರ್ಷಗಳಿಂದ ತಂಡದ ಜೊತೆ ಕಾರ್ಯ ನಿರ್ವಹಿಸಲು ಅವಕಾಶ ಮಾಡಿದ ಬಿಸಿಸಿಐಗೆ ಈ ಸಂದರ್ಭದಲ್ಲಿ ಧನ್ಯವಾದ ಹೇಳುತ್ತೇನೆ. ತಂಡ  ಮುಂದಿನ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡಲಿ. ಟೀಂ ಇಂಡಿಯಾಗೆ ಹಾಗೂ  ತಂಡದ ಸಹಾಯ ಸಿಬ್ಬಂಧಿಗಳಿಗೆ ನನ್ನ ಶುಭಕಾಮನೆಗಳು ಎಂದು ಪ್ಯಾಟ್ರಿಕ್ ಟ್ವೀಟ್ ಮಾಡಿದ್ದಾರೆ.

 

ಇದನ್ನೂ ಓದಿ: ವಿಶ್ವಕಪ್‌ನಲ್ಲಿ ಭಾರತಕ್ಕೆ ಆಘಾತ; ಕೊಹ್ಲಿ ಸೈನ್ಯಕ್ಕೆ ಫ್ಯಾನ್ಸ್ ಬೆಂಬಲ!

2015ರಲ್ಲಿ ಟೀಂ ಇಂಡಿಯಾ ಸೇರಿಕೊಂಡ ಪ್ಯಾಟ್ರಿಕ್,ಆನ್ ಫೀಲ್ಡ್ ಹಾಗೂ ಆಫ್ ದಿ ಫೀಲ್ಡ್‌ನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರ ಮುತುವರ್ಜಿ ವಹಿಸಿದ್ದರು. ಮೈದಾನದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಗಾಯಗೊಂಡಾಗ ಮಿಂಚಿನ ವೇಗದಲ್ಲಿ ಧಾವಿಸಿ, ನೋವು ನಿವಾರಿಸುತ್ತಿದ್ದರು. ಆಟಗಾರರ ಜೊತೆ ಪ್ಯಾಟ್ರಿಕ್ ಆತ್ಮೀಯವಾಗಿದ್ದರು. ಹೀಗಾಗಿ ಪ್ಯಾಟ್ರಿಕ್ ಮೇಲೆ ಟೀಂ ಇಂಡಿಯಾ ಕ್ರಿಕೆಟಿಗರು ಅಷ್ಟೇ ಪ್ರೀತಿ ಹಾಗೂ ಗೌರವವಿದೆ.