ಮ್ಯಾಂಚೆಸ್ಟರ್(ಜು.10): ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಆಘಾತ ಅನುಭವಿಸಿದೆ. ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿ ಟೂರ್ನಿಗೆ ವಿದಾಯ ಹೇಳಿದೆ. ದಿಟ್ಟ ಹೋರಾಟ ನೀಡಿ 18 ರನ್ ವಿರೋಚಿತ ಸೋಲು ಅನುಭವಿಸಿರುವ ಟೀಂ ಇಂಡಿಯಾಗೆ ಅಭಿಮಾನಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಸೋಲು ನೋವು ತಂದಿದೆ, ಆದರೆ ನಮ್ಮ ಬೆಂಬಲ ಯಾವತ್ತು ಟೀಂ ಇಂಡಿಯಾಗಿದೆ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.