ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದ ಸೋಲು ಯಾರಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರ ಜೊತೆಗೆ ಅಂಪೈರ್ ತಪ್ಪಿಗೆ ಟೀಂ ಇಂಡಿಯಾ ಸೋಲಿಗೆ ಶರಣಾಗಿದೆ ಅನ್ನೋ ಚರ್ಚೆ ಶುರುವಾಗಿದೆ. ಡೆಡ್ ಬಾಲ್ ಆಗಿದ್ದರೂ ಲೀಗಲ್ ಡೆಲಿವರಿ ನೀಡಿದ ಅಂಪೈರ್ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತವಾಗಿದೆ.
ಮ್ಯಾಂಚೆಸ್ಟರ್(ಜು.11): ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಹೋರಾಟ ಅಂತ್ಯಗೊಂಡಿದೆ. ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮಗ್ಗರಿಸಿ ಟೂರ್ನಿಯಿಂದ ಹೊರಬಿತ್ತು. ಪಂದ್ಯದಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದ ಭಾರತ ದಿಢೀರ್ ಸೋಲಿನತ್ತ ತಿರುಗಲು ರವೀಂದ್ರ ಜಡೇಜಾ ಔಟ್ ಹಾಗೂ ಎಂ.ಎಸ್.ಧೋನಿ ರನೌಟ್ ಮುಖ್ಯ ಕಾರಣ. ಧೋನಿ ರನೌಟ್ ಇದೀಗ ಮತ್ತೊಂದು ವಿವಾದ ಸೃಷ್ಟಿಸಿದೆ. ನ್ಯೂಜಿಲೆಂಡ್ ನಿಯಮ ಉಲ್ಲಂಘಿಸಿದರೂ ಅಂಪೈರ್ ಮಾತ್ರ ಎಚ್ಚೆತ್ತುಕೊಳ್ಳಲಿಲ್ಲ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಧೋನಿ ಟೀಕಿಸುವ ಮುನ್ನ ಕೇನ್ ವಿಲಿಯಮ್ಸನ್ ಮಾತನ್ನೊಮ್ಮೆ ಕೇಳಿ...
49ನೇ ಓವರ್‍ನಲ್ಲಿ ನಿಯಮದ ಪ್ರಕಾರ 5 ಫೀಲ್ಡರ್‌ಗಳು ಮಾತ್ರ 30 ಯಾರ್ಡ್ ಸರ್ಕಲ್‌ನಿಂದ ಹೊರಗೆ ನಿಲ್ಲಲು ಅವಕಾಶ. ಆದರೆ 6 ಫೀಲ್ಡರ್‌ಗಳು 30 ಯಾರ್ಡ್ ಸರ್ಕಲ್ ಹೊರಗಿದ್ದರು. ಹೀಗಿದ್ದಾಗ ಡೆಡ್ ಬಾಲ್ ಎಂದು ಪರಿಗಣಿಸಬೇಕು. ಧೋನಿ ರನೌಟ್ ಆಗೋ ಮುನ್ನ 6 ಫೀಲ್ಡರ್ ಹೊರಗಿದ್ದರೂ ಡೆರ್ ಬಾಲ್ ನೀಡಲಿಲ್ಲ. ಅಂಪೈರ್ ಗಮನಿಸಿದ ಕಾರಣ ಧೋನಿ ರನೌಟ್‌ಗೆ ಬಲಿಯಾದರು. ಒಂದು ವೇಳೆ ಅಂಪೈರ್ ಎಚ್ಚೆತ್ತುಕೊಂಡಿದ್ದರೆ, ಧೋನಿ ರನೌಟ್ ಆಗಿದ್ದರೂ ಡೆಡ್ ಬಾಲ್ ಎಂದು ಪರಿಗಣಿಸಿ, ಹೊಸ ಎಸೆತಕ್ಕೆ ಅವಕಾಶ ಮಾಡಿಕೊಡಬೇಕಿತ್ತು.
ಇದನ್ನೂ ಓದಿ: ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಕೊಹ್ಲಿ ಪಡೆ ಸಂತೈಸಿದ ಮೋದಿ!
ಅಂಪೈರ್ ನಿರ್ಲಕ್ಷ್ಯಕ್ಕೆ ಟೀಂ ಇಂಡಿಯಾದ ಫಲಿತಾಂಶವೇ ಬದಲಾಯಿತು. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
