ಲಂಡನ್(ಜೂ.14): ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಅಭಿಮಾನಿಗಳ ಜೊತೆ ಆತ್ಮೀಯ ಸಂಬಂಧ ಇಟ್ಟುಕೊಂಡಿದ್ದಾರೆ. ಹೀಗಾಗಿಯೇ ಧೋನಿಗೆ ವಿಶ್ವದೆಲ್ಲೆಡೆ ಅಭಿಮಾನಿಗಳಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ಪಂದ್ಯ ಅಂದಕೂಡಲೆ ಪಾಕ್ ಅಭಿಮಾನಿ ಚಾಚಾ ಕ್ರೀಡಾಂಗಣದಲ್ಲಿ ಹಾಜರಿರುತ್ತಾರೆ. ಪಾಕ್ ಅಭಿಮಾನಿ ಚಾಚಾ ಎಲ್ಲರಿಗೂ ಚಿರಪರಿಚಿತ. ಕಾರಣ ಇಂಡೋ-ಪಾಕ್ ಹೋರಾಟವಾದರೂ ಅಭಿಮಾನಿ ಚಾಚಾ ಧೋನಿಗೆ ಬೆಂಬಲ ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ: ಧೋನಿ ಹೊಟೇಲ್- MSD ಅಭಿಮಾನಿಗಳಿಗೆ ಫ್ರೀ ಊಟ!

ಜೂನ್ 16 ರಂದು ವಿಶ್ವಕಪ್ ಟೂರ್ನಿ ಲೀಗ್ ಹೋರಾಟದಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುತ್ತಿದೆ. ಈ ಪಂದ್ಯದ ಟಿಕೆಟ್‌ಗಾಗಿ ಪಾಕಿಸ್ತಾನ ಅಭಿಮಾನಿ ಮೊಹಮ್ಮದ್ ಬಶೀರ್ ಅಲಿಯಾಸ್ ಚಾಚಾ ಪರದಾಡಬೇಕಿಲ್ಲ. ಕಾರಣ ಎಂ.ಎಸ್.ಧೋನಿ ಸ್ವತಃ ಈ ಮಹತ್ವದ ಪಂದ್ಯದ ಟಿಕೆಟ್‌ನ್ನು ಚಾಚಾಗೆ ನೀಡಿದ್ದಾರೆ. ಇವರಿಬ್ಬರ ಸ್ನೇಹ ಇಂದು ನಿನ್ನೆಯದಲ್ಲ.

2011ರ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಬಶೀರ್ ಚಾಚಾ ಮೊಹಾಲಿಗೆ ಆಗಮಿಸಿದ್ದರು. ಮಹತ್ವದ ಪಂದ್ಯದಲ್ಲಿ ಬಶೀರ್ ಧೋನಿಗೆ ಬೆಂಬಲ ಸೂಚಿಸಿ ಗಮನಸೆಳೆದಿದ್ದರು. ಅಲ್ಲಿಂದ ಧೋನಿ ಹಾಗೂ ಚಾಚಾ ನಡುವಿನ ಸ್ನೇಹ ಗಾಢವಾಗಿದೆ.  ಬಶೀರ್ ಯಾವುದೇ ಇಂಡೋ-ಪಾಕ್ ಪಂದ್ಯ ಮಿಸ್ ಮಾಡಿಕೊಂಡಿಲ್ಲ. ವಿಶ್ವದ ಎಲ್ಲೇ ಪಂದ್ಯ ಆಯೋಜಿಸಿದರೂ ಚಾಚಾ ತೆರಳಿ ಪಂದ್ಯ ವೀಕ್ಷಿಸಿದ್ದಾರೆ. 2011ರ ಬಳಿಕ ಧೋನಿ, ಚಾಚಾಗೆ ಟಿಕೆಟ್ ನೀಡುತ್ತಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ 2019: ಫಲಿಸಲಿಲ್ಲ ಕೇದಾರ್ ಜಾಧವ್ ಪ್ರಾರ್ಥನೆ!

2019ರ ವಿಶ್ವಕಪ್ ಟೂರ್ನಿಯ ಇಂಡೋ-ಪಾಕ್ ಪಂದ್ಯಕ್ಕಾಗಿ ಮ್ಯಾಂಚೆಸ್ಟರ್ ತಲುಪಿದ್ದಾರೆ. ನಾನು ಧೋನಿಗೆ ಫೋನ್ ಮಾಡುವುದಿಲ್ಲ. ಕಾರಣ ಧೋನಿ ಬ್ಯುಸಿ ಇರುತ್ತಾರೆ. ಆದರೆ ಮೆಸೇಜ್ ಮೂಲಕ ಧೋನಿ ಜೊತೆ ಮಾತುಕತೆ ನಡೆಸುತ್ತೇನೆ. ಧೋನಿ ನನಗೆ ಫ್ರೀಯಾಗಿ ಟಿಕೆಟ್ ನೀಡಿದ್ದಾರೆ. ಭಾರತದ ಸಚಿನ್ ತೆಂಡುಲ್ಕರ್ ಅಭಿಮಾನಿ ಸುಧೀರ್ ಹಾಗೂ ನಾನು ಒಂದೇ ಹೊಟೇಲ್ ರೂಂನಲ್ಲಿ ತಂಗಿದ್ದೇವೆ. ಜೂನ್ 16 ರಂದು ಇಬ್ಬರು ಜೊತೆಯಾಗಿ ಪಂದ್ಯ ವೀಕ್ಷಿಸಲು ತೆರಳುತ್ತೇವೆ ಎಂದು ಚಾಚಾ ಹೇಳಿದ್ದಾರೆ.