ನಾಟಿಂಗ್‌ಹ್ಯಾಮ್(ಜೂ.13): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಲೀಗ್ ಪಂದ್ಯ ಮಳೆಯಿಂದ ರದ್ದಾಗಿದೆ. ನಾಟಿಂಗ್‌ಹ್ಯಾಮ್‌ನಲ್ಲಿ ಸುರಿದ ನಿರಂತರ ಮಳೆಯಿಂದ ಪಂದ್ಯ ರದ್ದುಗೊಂಡಿದೆ. ಮಳೆ ಸುರಿಯುತ್ತಿದ್ದಂತೆ ಟೀಂ ಇಂಡಿಯಾ ಆಲ್ರೌಂಡರ್ ಕೇದಾರ್ ಜಾಧವ್ ಪ್ರಾರ್ಥನೆ ಮಾಡಿದ್ದರು. ಆದರೆ ಜಾಧವ್ ಪ್ರಾರ್ಥನೆ ಫಲಿಸಲಿಲ್ಲ.

ಇದನ್ನೂ ಓದಿ: ರದ್ದಾಯ್ತು ಇಂಡೋ-ಕಿವೀಸ್ ಪಂದ್ಯ-ಅಂಕಪಟ್ಟಿಯಲ್ಲಿ ಏರುಪೇರು!

ಮಳೆ ಆರಂಭವಾಗುತ್ತಿದ್ದಂತೆ ಕೇದಾರ್ ಜಾಧವ್ ದೇವರ ಮೊರೆ ಹೋಗಿದ್ದರು. ನಾಟಿಂಗ್‌ಹ್ಯಾಮ್ ಬದಲು ಬರಗಾಲದಿಂದ ತತ್ತರಿಸಿರುವ ಮಹಾರಾಷ್ಟ್ರದಲ್ಲಿ ಸುರಿಯಲು ಕೇಳಿಕೊಂಡಿದ್ದರು. ಆದರೆ ಮಳೆ ನಾಟಿಂಗ್‌ಹ್ಯಾಮ್‌ನಲ್ಲೇ ಸುರಿದು ಪಂದ್ಯ ರದ್ದಾಗುವಂತೆ ಮಾಡಿದೆ.

 

 

ಇದನ್ನೂ ಓದಿ: ಯುವಿ ವಿದಾಯ: ರೋಹಿತ್ ಶರ್ಮಾ ಟ್ವೀಟ್ ವೈರಲ್...!

ಕೇದಾರ್ ಜಾಧವ್ ಮರಾಠಿಯಲ್ಲಿ ಪಾರ್ಥನೆ ಸಲ್ಲಿಸಿರುವ ವೀಡಿಯೋ ವೈರಲ್ ಆಗಿದೆ. ಕಿವೀಸ್ ವಿರುದ್ಧದ ಪಂದ್ಯ ಕ್ಯಾನ್ಸಲ್ ಆಗಿರೋ ಕಾರಣ ಅಭಿಮಾನಿಗಳು ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಕಾಯುತ್ತಿದ್ದಾರೆ. ಆದರೆ ಮ್ಯಾಂಚೆಸ್ಟರ್‌ನಲ್ಲಿ ಕೂಡ ಮಳೆ ಭೀತಿ ಇದೆ ಎಂದು ಹವಾಮಾನ ವರದಿ ಹೇಳುತ್ತಿದೆ.