Asianet Suvarna News Asianet Suvarna News

ಇಂಡೋ-ಪಾಕ್ ಫೈಟ್: ಮಳೆ ಬರುತ್ತಾ..? ಇಲ್ಲಿದೆ ನೋಡಿ ಹವಾಮಾನ ವರದಿ

ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ನಡೆಯಲಿರುವ ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುತ್ತಾ..? ಹೇಗಿದೆ ಮ್ಯಾಂಚೆಸ್ಟರ್ ವಾತಾವರಣ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

Manchester Weather Updates rain may Affect India vs Pakistan World Cup Match
Author
Manchester, First Published Jun 15, 2019, 5:07 PM IST

ಮ್ಯಾಂಚೆಸ್ಟರ್[ಜೂ.15]: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕದನಕ್ಕೆ ಇಲ್ಲಿನ ಓಲ್ಡ್ ಟ್ರಾಫೋರ್ಡ್ ಮೈದಾನ ಸಾಕ್ಷಿಯಾಗಲಿದೆ. 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದ ಉಭಯ ತಂಡಗಳು ಮತ್ತೊಮ್ಮೆ ಕಾದಾಡಲು ಸಜ್ಜಾಗಿವೆ.

ಚೆಂಡಿನಾಟದ ಯುದ್ಧ: ಪಾಕ್ ವಿರುದ್ಧ ಯಾವಾಗಲೂ ಗೆಲುವಿಗೆ ಭಾರತ ಸಿದ್ಧ!

ಇದುವರೆಗೂ ವಿಶ್ವಕಪ್ ಟೂರ್ನಿಯಲ್ಲಿ ಉಭಯ ತಂಡಗಳು 6 ಬಾರಿ ಮುಖಾಮುಖಿಯಾಗಿದ್ದು, ಭಾರತ ಎಲ್ಲಾ ಪಂದ್ಯಗಳಲ್ಲೂ ಗೆದ್ದು ಪ್ರಾಬಲ್ಯ ಮೆರೆದಿದೆ. ಈ ಹೈವೋಲ್ಟೇಜ್ ಮ್ಯಾಚ್ ಕಣ್ತುಂಬಿಕೊಳ್ಳಲು 60 ಸಾವಿರ ರುಪಾಯಿಗೂ ಹೆಚ್ಚು ಹಣ ನೀಡಿ ಅಭಿಮಾನಿಗಳು ಟಿಕೆಟ್ ಖರೀದಿಸಿದ್ದಾರೆ. ಆದರೆ ಇವೆಲ್ಲವುದರ ನಡುವೆ ಭಾನುವಾರ ಮ್ಯಾಂಚೆಸ್ಟರ್‌ನಲ್ಲಿ ಮಳೆ ಪಂದ್ಯಕ್ಕೆ ಅಡ್ಡಿಪಡಿಸುತ್ತಾ ಎನ್ನುವ ಬಗ್ಗೆ ಎಲ್ಲರು ತಲೆಕೆಡಿಸಿಕೊಂಡಿದ್ದಾರೆ. ಯಾಕೆಂದರೆ ಈಗಾಗಲೇ ವಿಶ್ವಕಪ್ ಟೂರ್ನಿಯಲ್ಲಿ 4 ಪಂದ್ಯಗಳು ಮಳೆಯಿಂದಾಗಿ ರದ್ದಾಗಿದ್ದನ್ನು ನಾವು ನೋಡಿದ್ದೇವೆ. ಭಾರತ-ನ್ಯೂಜಿಲೆಂಡ್ ನಡುವಿನ ಪಂದ್ಯವು ಟಾಸ್ ಕೂಡಾ ನಡೆಯದೇ ಪಂದ್ಯ ರದ್ದಾಗಿತ್ತು.

ಇಂಡೋ-ಪಾಕ್ ವಿಶ್ವಕಪ್ ಪಂದ್ಯದ 5 ಅವಿಸ್ಮರಣೀಯ ಘಟನೆ!

ಮ್ಯಾಂಚೆಸ್ಟರ್’ನಲ್ಲಿ ಭಾನುವಾರ ಮಳೆ ಬರುತ್ತಾ..?

ಹೌದು, ಭಾನುವಾರ ನಡೆಯಲಿರುವ ಪಂದ್ಯಕ್ಕೆ ವರುಣರಾಯ ಸ್ವಲ್ಪ ಅಡ್ಡಿಪಡಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಆಕ್ಯುವೆದರ್ ಹವಾಮಾನ ವರದಿ ಪ್ರಕಾರ, ಸ್ಥಳೀಯ ಕಾಲಮಾನ, 12-01 ಗಂಟೆಗೆ [ಭಾರತೀಯ ಕಾಲಮಾನ 4.30ರಿಂದ 5.30ರ ಸುಮಾರಿಗೆ] ತುಂತುರು ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಯಿಂದ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಆರಂಭವಾಗಲಿದೆ.

Manchester Weather Updates rain may Affect India vs Pakistan World Cup Match

ಭಾನುವಾರ ಮ್ಯಾಂಚೆಸ್ಟರ್ ಸುತ್ತಮುತ್ತ ಮೋಡ ಕವಿದ ವಾತಾವರಣ ಇರಲಿದ್ದು, ಮತ್ತೆ ಭಾರತೀಯ ಕಾಲಮಾನ ರಾತ್ರಿ 9.30ರ ಸುಮಾರಿಗೆ ಮತ್ತೊಮ್ಮೆ ಮಳೆಯಾಗಲಿದೆ ಎಂದು ಹವಾಮಾನ ವರದಿ ತಿಳಿಸಿದೆ. 

Manchester Weather Updates rain may Affect India vs Pakistan World Cup Match

ವಿಶ್ವಕಪ್ ಟೂರ್ನಿಯ ರೌಂಡ್ ರಾಬಿನ್ ಪಂದ್ಯಗಳಿಗೆ ಐಸಿಸಿ ಯಾವುದೇ ಮೀಸಲು ದಿನವನ್ನು ನಿಗದಿ ಪಡಿಸಿಲ್ಲ. ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಿಗೆ ಮೀಸಲು ದಿನ ನಿಗದಿಪಡಿಸಲಾಗಿದೆ. 

ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...

Manchester Weather Updates rain may Affect India vs Pakistan World Cup Match

Follow Us:
Download App:
  • android
  • ios