ಬೆಂಗಳೂರು(ಜೂ.15): ಭಾರತ ಹಾಗೂ ಪಾಕಿಸ್ತಾನ ನಡುವೆ ಯಾವುದೇ ಕ್ರೀಡೆ ಇನ್ನಿಲ್ಲದ ಗಮನಸೆಳೆಯುತ್ತೆ. ಇಲ್ಲಿ ಯಾರೂ ಕೂಡ ಸೋಲನ್ನ ಸಹಿಸಲ್ಲ. 2019ರ ವಿಶ್ವಕಪ್ ಟೂರ್ನಿಯಲ್ಲೂ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುತ್ತಿವೆ. ಜೂನ್ 16 ರಂದು ಇಂಡೋ-ಪಾಕ್ ಹೋರಾಟ ನಡೆಯಲಿದೆ. ಇದು 7ನೇ ಮುಖಾಮುಖಿ. ಇದಕ್ಕೂ ಮೊದಲು ವಿಶ್ವಕಪ್ ಟೂರ್ನಿಯಲ್ಲಿ 6 ಬಾರಿ ಭಾರತ -ಪಾಕಿಸ್ತಾನ ಮುಖಾಮುಖಿಯಾಗಿವೆ.

ಇದನ್ನೂ ಓದಿ: ವಿಶ್ವಕಪ್ 2019: ವಿರಾಟ್ ಕೊಹ್ಲಿಗೆ 4ನೇ ಕ್ರಮಾಂಕ?

ವಿಶ್ವಕಪ್ ಟೂರ್ನಿಯ ಪ್ರತಿ ಪಂದ್ಯದಲ್ಲೂ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನೂ ಸೋಲಿಸಿದೆ. ಇಷ್ಟೇ ಅಲ್ಲ ಹಲವು ದಾಖಲೆಗಳನ್ನು ಕೂಡ ಬರೆದಿದೆ. ಇಂಡೋ-ಪಾಕ್ ವಿಶ್ವಕಪ್ ಟೂರ್ನಿ ಹೋರಾಟದ ಸಂಪೂರ್ಣ ಇತಿಹಾಸ ಇಲ್ಲಿದೆ.

ಇದನ್ನೂ ಓದಿ: ವಿಶ್ವಕಪ್ 2019: ಟೀಂ ಇಂಡಿಯಾ ಮುಂದಿರುವ 3 ಚಾಲೆಂಜ್!

ಭಾರತ-ಪಾಕಿಸ್ತಾನ ವಿಶ್ವಕಪ್ ಮುಖಾಮುಖಿ:
1992 - ಭಾರತಕ್ಕೆ 43 ರನ್ ಗೆಲುವು
1996 - ಭಾರತಕ್ಕೆ 39 ರನ್ ಗೆಲುವು
1999- ಭಾರತಕ್ಕೆ 47 ರನ್ ಗೆಲುವು
2003- ಭಾರತಕ್ಕೆ 6 ವಿಕೆಟ್ ಗೆಲುವು 
2011- ಭಾರತಕ್ಕೆ 29 ರನ್ ಗೆಲುವು
2015- ಭಾರತಕ್ಕೆ 76 ರನ್ ಗೆಲುವು

ಇದನ್ನೂ ಓದಿ: ವಿಶ್ವಕಪ್ 2019: ಸೆಮಿಫೈನಲ್‌ ಪ್ರವೇಶಿಸಬಲ್ಲ ಬಲಿಷ್ಠ 4 ತಂಡಗಳು ಯಾವುವು?

ಪಂದ್ಯಶ್ರೇಷ್ಠ ಪ್ರಶಸ್ತಿ:
1992 - ಸಚಿನ್ ತೆಂಡುಲ್ಕರ್
1996 - ನವಜೋತ್ ಸಿಂಗ್ ಸಿಧು
1999- ವೆಂಕಟೇಶ್ ಪ್ರಸಾದ್
2003- ಸಚಿನ್ ತೆಂಡುಲ್ಕರ್ 
2011- ಸಚಿನ್ ತೆಂಡುಲ್ಕರ್
2015- ವಿರಾಟ್ ಕೊಹ್ಲಿ

ಬ್ಯಾಟಿಂಗ್ ಪ್ರದರ್ಶನ:
307/7
ಪಾಕಿಸ್ತಾನ ವಿರುದ್ದ ಭಾರತ ಸಿಡಿಸಿದ(ವಿಶ್ವಕಪ್ 2015) ಗರಿಷ್ಠ ಸ್ಕೋರ್.

173 ಆಲೌಟ್
1992ರ ವಿಶ್ವಕಪ್‌ನಲ್ಲಿ  ಪಾಕಿಸ್ತಾನ ಅತ್ಯಂತ ಕಡಿಮೆ ಮೊತ್ತಕ್ಕೆ(173 ರನ್) ಆಲೌಟ್ ಆಗಿತ್ತು

313
ಇಂಡೋ-ಪಾಕ್ ಸರಣಿಯಲ್ಲಿ ಸಚಿನ್ ತೆಂಡುಲ್ಕರ್ ಗರಿಷ್ಠ ರನ್(313 ರನ್) ಸಿಡಿಸಿದ್ದಾರೆ

107
2015ರ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ವೈಯುಕ್ತಿ ಗರಿಷ್ಠ ಮೊತ್ತ(107 ರನ್) ದಾಖಲಿಸಿದ್ದಾರೆ

2 ಶತಕ
ಇಂಡೋ-ಪಾಕ್ ಹೋರಾಟದಲ್ಲಿ 2 ಶತಕಗಳು ದಾಖಲಾಗಿದೆ. ಸೈಯ್ಯದ್ ಅನ್ವರ್(101 in 2003) ಹಾಗೂ ವಿರಾಟ್ ಕೊಹ್ಲಿ (107 in 2015)

13 ಅರ್ಧಶತಕ
ಇಂಡೋ-ಪಾಕ್ ವಿಶ್ವಕಪ್ ಹೋರಾಟದಲ್ಲಿ 13 ಅರ್ಧಶತಕಗಳು ದಾಖಲಾಗಿವೆ

3 ಅರ್ಧಶತಕ
ಸಚಿನ್ ತೆಂಡುಲ್ಕರ್ ಗರಿಷ್ಠ ಅರ್ಧಶತಕ(3 ) ಸಿಡಿಸಿದ್ದಾರೆ

ಇದನ್ನೂ ಓದಿ: 2020 ಟಿ20 ವಿಶ್ವಕಪ್: ಗುಂಪು ಹಂತದಲ್ಲಿ ಭಾರತ-ಪಾಕ್ ಮುಖಾಮುಖಿ ಇಲ್ಲ!

ಬೌಲಿಂಗ್ ಪ್ರದರ್ಶನ:
8
ವೆಂಕಟೇಶ್ ಪ್ರಸಾದ್ ಗರಿಷ್ಠ ವಿಕೆಟ್(8)ಕಬಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ

5/27 
1999 ರ ವಿಶ್ವಕಪ್ ಹೋರಾಟದಲ್ಲಿ ವೆಂಕಟೇಶ್ ಪ್ರಸಾದ್ ಬೆಸ್ಟ್ ಬೌಲಿಂಗ್(5/27 ) ಪ್ರದರ್ಶನ ನೀಡಿದ್ದಾರೆ

5 ವಿಕೆಟ್ ಸಾಧನೆ
3 ಬಾರಿ 5 ವಿಕೆಟ್ ಸಾಧನೆ ದಾಖಲಾಗಿದೆ. ವೆಂಕಟೇಶ್ ಪ್ರಸಾದ್ (5/27 in 1992), ವಹಾಬ್ ರಿಯಾಝ್ (5/46 in 2011) ಸೊಹೈಲ್ ಖಾನ್ (5/55 in 2015)

ವಿಕೆಟ್ ಕೀಪಿಂಗ್ ಪ್ರದರ್ಶನ:
4 ಸ್ಟಂಪ್
ಎಂ.ಎಸ್.ಧೋನಿ ಗರಿಷ್ಠ ಸ್ಟಂಪ್(4) ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ

ಫೀಲ್ಡಿಂಗ್ ಪ್ರದರ್ಶನ:
5 ಕ್ಯಾಚ್
ಅನಿಲ್ ಕುಂಬ್ಳೆ ಗರಿಷ್ಠ ಕ್ಯಾಚ್ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ