ಮಾಲಿಂಗ ದಾಖಲೆಗಳ ಕಿರೀಟಕ್ಕೆ ಮತ್ತೊಂದು ಗರಿ
ವಿಶ್ವಕಪ್ ಟೂರ್ನಿಯಲ್ಲಿ ಲಂಕಾ ಅನುಭವಿ ವೇಗಿ ಲಸಿತ್ ಮಾಲಿಂಗ ಅಪರೂಪದ ಸಾಧನೆ ಮಾಡಿದ್ದಾರೆ. ಅದ್ಭುತ ಬೌಲಿಂಗ್ ಪ್ರದರ್ಶನದ ನೆರವಿನಿಂದ ಇಂಗ್ಲೆಂಡ್ ವಿರುದ್ಧ ಲಂಕಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಮಾಲಿಂಗ ಹೊಸ ದಾಖಲೆ ಮಾಡಿದ್ದಾರೆ. ಈ ದಾಖಲೆ ಅಳಿಸೋದು ಸದ್ಯಕ್ಕಂತೂ ಅಸಾಧ್ಯ ಎನ್ನುವುದು ಅಭಿಮಾನಿಗಳ ಲೆಕ್ಕಾಚಾರ.
ಲಂಡನ್[ಜೂ.22]: ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಬಗ್ಗುಬಡಿಯುವಲ್ಲಿ ಶ್ರೀಲಂಕಾ ಯಶಸ್ವಿಯಾಗಿದೆ. ಲಂಕಾದ ಅನುಭವಿ ವೇಗಿ ಲಸಿತ್ ಮಾಲಿಂಗ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ 20 ರನ್ ಗಳ ಸೋಲು ಕಂಡಿತು. ಇಂಗ್ಲೆಂಡ್ ನ ಪ್ರಮುಖ ನಾಲ್ಕು ವಿಕೆಟ್ ಕಬಳಿಸಿದ ಮಾಲಿಂಗ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ 2 ಬಾರಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಏಕೈಕ ಬೌಲರ್ ಎನ್ನುವ ದಾಖಲೆ ಬರೆದಿರುವ ಮಾಲಿಂಗ ಇದೀಗ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮತ್ತೊಂದು ಅಪರೂಪದ ದಾಖಲೆ ಮಾಡಿದ್ದಾರೆ.
ಹೌದು, ಇಂಗ್ಲೆಂಟ್‌ನ ಜೋ ರೂಟ್ ವಿಕೆಟ್ ಕಬಳಿಸುವುದರ ಮೂಲಕ ಏಕದಿನ ವಿಶ್ವಕಪ್’ನಲ್ಲಿ ಅತಿ ವೇಗವಾಗಿ 50 ವಿಕೆಟ್ ಕಬಳಿಸಿದ ಬೌಲರ್ ಎನ್ನುವ ಅಪರೂಪದ ದಾಖಲೆ ಮಾಡಿದ್ದಾರೆ. ಮಾಲಿಂಗ ಕೇವಲ 25 ಇನಿಂಗ್ಸ್‌ಗಳಲ್ಲಿ 50 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಬಲಿಷ್ಠ ಇಂಗ್ಲೆಂಡ್‌ಗೆ ಲಂಕಾ ಶಾಕ್- ಟೂರ್ನಿಯಲ್ಲಿ ಭರ್ಜರಿ ಕಮ್‌ಬ್ಯಾಕ್!
ವಿಶ್ವಕಪ್ ಟೂರ್ನಿಯಲ್ಲಿ ಒಟ್ಟಾರೆ ಗರಿಷ್ಠ ವಿಕೆಟ್ ಪಡೆದ ದಾಖಲೆ ಆಸ್ಟ್ರೇಲಿಯಾ ವೇಗಿ ಗ್ಲೇನ್ ಮೆಗ್ರಾತ್ ಹೆಸರಿನಲ್ಲಿದೆ. ಮೆಗ್ರಾತ್[71] ಮೊದಲ ಸ್ಥಾನದಲ್ಲಿದ್ದರೆ, ಲಂಕಾದ ಮಾಂತ್ರಿಕ ಸ್ಪಿನ್ನರ್[68] ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಪಾಕ್ ವೇಗಿ ವಾಸೀಂ ಅಕ್ರಂ[55] ಮೂರನೇ ಸ್ಥಾನದಲ್ಲಿದ್ದಾರೆ. ಪ್ರಸ್ತುತ ಮಾಲಿಂಗ 51 ವಿಕೆಟ್’ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದು, ಇನ್ನು ಕೇವಲ 5 ವಿಕೆಟ್ ಕಬಳಿಸಿದರೆ ಮೂರನೇ ಸ್ಥಾನಕ್ಕೇರಲಿದ್ದಾರೆ. ವಿಶ್ವಕಪ್ ನಲ್ಲಿ 50 ವಿಕೆಟ್ ಪಡೆಯಲು ಮೆಗ್ರಾತ್ ಹಾಗೂ ಮುತ್ತಯ್ಯ ಮುರಳೀಧರನ್ 30 ಇನಿಂಗ್ಸ್ ತೆಗೆದುಕೊಂಡರೆ, ವಾಸೀಂ ಅಕ್ರಂ 33 ಇನಿಂಗ್ಸ್’ಗಳಲ್ಲಿ 50 ವಿಕೆಟ್ ಪಡೆದಿದ್ದರು.
ಆಫ್ಘನ್ ಬೇಟೆಯಾಡಲು ಟೀಂ ಇಂಡಿಯಾ ರೆಡಿ!
ಇನ್ನು ಹಾಲಿ ವಿಶ್ವಕಪ್ ಆಡುತ್ತಿರುವ ಆಟಗಾರರ ಪೈಕಿ ಒಟ್ಟಾರೆ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಸಾಧಕರ ಪಟ್ಟಿಯಲ್ಲೂ ಮಾಲಿಂಗ ಅಗ್ರಸ್ಥಾನದಲ್ಲಿದ್ದಾರೆ.ಮಾಲಿಂಗ 51 ವಿಕೆಟ್’ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಇಮ್ರಾನ್ ತಾಹಿರ್ ಹಾಗೂ ಮಿಚೆಲ್ ಸ್ಟಾರ್ಕ್ 37 ವಿಕೆಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಟಿಮ್ ಸೌಥಿ[33], ವಹಾಬ್ ರಿಯಾಜ್[29] ಆನಂತರದ ಸ್ಥಾನದಲ್ಲಿದ್ದಾರೆ. ತಾಹಿರ್ ಹಾಗೂ ಮಿಚೆಲ್ ಸ್ಟಾರ್ಕ್ ಪಾಲಿಗೆ ಬಹುತೇಕ ಇದು ಕೊನೆಯ ವಿಶ್ವಕಪ್ ಆಗಿರುವುದರಿಂದ ಮಾಲಿಂಗ ದಾಖಲೆ ಸದ್ಯಕ್ಕೆ ಅಳಿಸಿಹೋಗುವುದು ಕನಸಿನ ಮಾತು.
ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...