ಮ್ಯಾಂಚೆಸ್ಟರ್(ಜು.10): ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ ಪತನ ಎಲ್ಲರ ಆತಂಕ ಹೆಚ್ಚಿಸಿದೆ. ಅದರಲ್ಲೂ ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ಒಂದಂಕಿಗೆ ಪೆವಿಲಿಯನ್ ಸೇರಿರುವುದು ತಂಡದ ಗೆಲುವಿನ ಹಾದಿ ಮತ್ತಷ್ಟು ಕಠಿಣವಾಗಿಸಿದೆ. ರೋಹಿತ್ ಶರ್ಮಾ, ನಾಯಕ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಬಹುಬೇಗನೆ ಪೆವಿಲಿಯನ್ ಸೇರಿಕೊಳ್ಳೋ ಮೂಲಕ ಅನಗತ್ಯ ದಾಖಲೆಗೆ ಗುರಿಯಾಗಿದ್ದಾರೆ.

ಇದನ್ನೂ ಓದಿ: ICC ವಿಶ್ವಕಪ್: ಭಾರತ Vs ನ್ಯೂಜಿಲೆಂಡ್, ಮಳೆ Vs DRS

ಸೆಮಿಫೈನಲ್ ಪಂದ್ಯದಲ್ಲಿ 240 ರನ್ ಟಾರ್ಗೆಟ್ ಪಡೆದ ಟೀಂ ಇಂಡಿಯಾಗೆ ಘಟಾನುಘಟಿ ಬ್ಯಾಟ್ಸ್‌ಮನ್‌ಗಳು ಆಸರೆಯಾಗಲಿಲ್ಲ. ರೋಹಿತ್ ಶರ್ಮಾ 1 ರನ್, ವಿರಾಟ್ ಕೊಹ್ಲಿ 1 ರನ್ ಹಾಗೂ ಕೆಎಲ್ ರಾಹುಲ್ 1 ರನ್ ಸಿಡಿಸಿ ಪೆವಿಲಿಯನ್ ಸೇರಿದ್ದರು. ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಟಾಪ್ ತ್ರಿ ಬ್ಯಾಟ್ಸ್‌ಮನ್ 1 ರನ್ ಸಿಡಿಸಿ ಔಟಾಗಿದ್ದಾರೆ.

ಇದನ್ನೂ ಓದಿ:  ಇಂಡೋ-ಕಿವೀಸ್ ಸೆಮಿಫೈನಲ್; ಟೀಂ ಇಂಡಿಯಾ ಕಾಪಾಡೋ ಶ್ರೀಕೃಷ್ಣ!

2.4 ಓವರ್‌ಗಳಲ್ಲಿ ಭಾರತ 5 ರನ್ ಸಿಡಿಸಿ 3 ವಿಕೆಟ್ ಕಳೆದುಕೊಂಡಿತ್ತು. ನ್ಯೂಜಿಲೆಂಡ್ ವೇಗಿಗಳಾದ ಟ್ರೆಂಟ್ ಬೋಲ್ಟ್ ಹಾಗೂ ಮ್ಯಾಟ್ ಹೆನ್ರಿ ಎಸೆತಕ್ಕೆ ಟೀಂ ಇಂಡಿಯಾ ತತ್ತರಿಸಿತ್ತು.