ಮ್ಯಾಂಚೆಸ್ಟರ್(ಜು.10): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯ ಅಭಿಮಾನಿಗಳಿಗೆ ಮಾತ್ರವಲ್ಲ, ಸ್ವತಃ ಆಟಗಾರರ ಟೆನ್ಶನ್ ಕೂಡ ಹೆಚ್ಚಿಸಿದೆ. ಟೀಂ ಇಂಡಿಯಾದ ಒಂದೊಂದೆ ವಿಕೆಟ್ ಪತನಗೊಳ್ಳುತ್ತಿದ್ದಂತೆ ಪೆವಿಲಿಯನ್‌ನಲ್ಲಿದ್ದ ಎಂ.ಎಸ್.ಧೋನಿ ಬ್ಯಾಟ್ ಕಚ್ಚುತ್ತಿರುವ ದಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ICC ವಿಶ್ವಕಪ್: ಭಾರತ Vs ನ್ಯೂಜಿಲೆಂಡ್, ಮಳೆ Vs DRS

ಧೋನಿ ಶ್ರೀಕೃಷ್ಣನ ರೂಪದಲ್ಲಿ ಟೀಂ ಇಂಡಿಯಾವನ್ನು ಕಾಪಾಡಲಿದ್ದಾರೆ ಎಂದು ಅಭಿಮಾನಿಗಳು ಟ್ವಿಟರ್ ಮೂಲಕ ಆಶಯ ವ್ಯಕ್ತಪಡಿಸಿದ್ದಾರೆ. ಧೋನಿ ಬ್ಯಾಟ್ ಕಚ್ಚಿದ ಘಟನೆಗೆ ಅಭಿಮಾನಿಗಳ ಪ್ರತಿಕ್ರಿಯೆ ಇಲ್ಲಿದೆ.