ವಿಶ್ವಕಪ್ ಟೂರ್ನಿಯ ಕ್ಷಣಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

ಬೆಂಗಳೂರು[ಜು.10]: ಭಾರತ-ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದ ಪ್ರತಿ ಎಸೆತವೂ ರೋಚಕತೆ ಹೆಚ್ಚಿಸುತ್ತಿದ್ದು, ಆರಂಭಿಕ ಆಘಾತದ ಹೊರತಾಗಿಯೂ ಟೀಂ ಇಂಡಿಯಾ ಕಮ್ ಬ್ಯಾಕ್ ಮಾಡುವತ್ತ ದಿಟ್ಟ ಹೆಜ್ಜೆಯಿಟ್ಟಿದೆ. 

ಆ ಕರಾಳ ದಿನ ನೆನಪಿಸಿದ ಟೀಂ ಇಂಡಿಯಾದ ಈ ಪ್ರದರ್ಶನ

ಸೆಮಿಫೈನಲ್ ಮೊದಲ ದಿನದ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ ಮೀಸಲು ದಿನವಾದ ಇಂದು ಪಂದ್ಯ ನಡೆಯುತ್ತಿದ್ದು, ಭಾರತಕ್ಕೆ ಗೆಲ್ಲಲು 240 ರನ್ ಗಳ ಗುರಿ ನೀಡಿದೆ.  ಅಲ್ಪ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾಗೆ ಕಿವೀಸ್ ವೇಗಿಗಳು ಆರಂಭದಲ್ಲೇ ಆಘಾತ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಟೀಂ ಇಂಡಿಯಾದ ಮೊತ್ತ 5 ರನ್ ಗಳಾಗುವಷ್ಟರಲ್ಲೇ ಆರಂಭಿಕರಾದ ರೋಹಿತ್ ರಾಹುಲ್ ಮತ್ತು ನಾಯಕ ವಿರಾಟ್ ಪೆವಿಲಿಯನ್ ಸೇರಿದ್ದಾರೆ.  ಆ ಬಳಿಕ 5ನೇ ವಿಕೆಟ್’ಗೆ ರಿಷಭ್ ಪಂತ್-ಹಾರ್ದಿಕ್ ಪಾಂಡ್ಯ ಜೋಡಿ 47 ರನ್ ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಆದರೆ ಉತ್ತಮವಾಗಿ ಆಡುತ್ತಿದ್ದ ರಿಷಭ್ ಪಂತ್ 32 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದಾರೆ. ಈಗ ನಿಜಕ್ಕೂ ಟೀಂ ಇಂಡಿಯಾ ಅಭಿಮಾನಿಗಳು ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ.

ಇಂಡೋ-ಕಿವೀಸ್ ಸೆಮಿಫೈನಲ್; ಭಾರತದ 3 ವಿಕೆಟ್ ಪತನ, ಸಂಕಷ್ಟದಲ್ಲಿ ಕೊಹ್ಲಿ ಸೈನ್ಯ!

ಆದರೆ ಒಂದು ವೇಳೆ ಮಳೆ ಬಂದು ಪಂದ್ಯ ರದ್ದಾದರೆ DRS ಲೆಕ್ಕಾಚಾರ ಹೇಗಿರುತ್ತದೆ ಎನ್ನುವುದನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

ಉದಾಹರಣೆಗೆ ಭಾರತ ಈಗ 25 ಓವರ್ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 77 ರನ್ ಬಾರಿಸಿದೆ. ಈ ಸಂದರ್ಭದಲ್ಲಿ DRS ನಿಯಮದಂತೆ 138 ರನ್ ಗಳಿಸಿದ್ದರೆ ಭಾರತ ಗೆಲುವು ದಾಖಲಿಸುತ್ತಿತ್ತು. ಇನ್ನು ಭಾರತ 30 ಓವರ್’ನಲ್ಲಿ 5 ವಿಕೆಟ್ ನಷ್ಟಕ್ಕೆ 145 ರನ್ ಬಾರಿಸಿದರೆ ಭಾರತ ಜಯ ಗಳಿಸಲಿದೆ.