ಭಾರತ vs ವೆಸ್ಟ್ ಇಂಡೀಸ್ ಸ್ಕೋರ್ ಎಷ್ಟು?

ಬರ್ಮಿಂಗ್‌ಹ್ಯಾಮ್(ಜೂ.27): ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಉಭಯ ದೇಶದ ಅಭಿಮಾನಿಗಳು ಬದ್ಧವೈರಿಗಳು. ಇಲ್ಲಿ ಯಾರು ಕೂಡ ಸೋಲನ್ನು ಸಹಿಸುವುದಿಲ್ಲ. ಆದರೆ ಪಾಕಿಸ್ತಾನ ಇತರ ದೇಶದೊಂದಿಗೆ ಹೋರಾಡುತ್ತಿದ್ದರೆ ಬಹುತೇಕ ಸಂದರ್ಭದಲ್ಲಿ ಭಾರತೀಯ ಅಭಿಮಾನಿಗಳು ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಾರೆ. ಇದೀಗ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನದ ಗೆಲುವನ್ನು ಇಂಡೋ-ಪಾಕ್ ಅಭಿಮಾನಿಗಳು ಸಂಭ್ರಮಿಸಿದ್ದಾರೆ.  ನೆರೆಯ ರಾಷ್ಟ್ರಕ್ಕೆ ಬೆಂಬಲ ನೀಡೋ  ಮೂಲಕ ಹೊಸ ಸಂದೇಶ ನೀಡಿದ್ದಾರೆ. 

ಇದನ್ನೂ ಓದಿ: ಇಂಗ್ಲೆಂಡ್‌ ಈ ದಶಕದ ಹೊಸ ಚೋಕರ್ಸ್..!

ವಿಶ್ವಕಪ್ ಟೂರ್ನಿಯಲ್ಲಿ ಸೋಲಿಲ್ಲದೆ ಸರದಾನಾಗಿ ಮುನ್ನಗ್ಗುತ್ತಿದ್ದ ನ್ಯೂಜಿಲೆಂಡ್ ತಂಡವನ್ನು ಪಾಕಿಸ್ತಾನ 6 ವಿಕೆಟ್‌ಗಳಿಂದ ಮಣಿಸಿತ್ತು. ಗೆಲುವಿನ ಬಳಿಕ  ಪಾಕಿಸ್ತಾನ ಅಭಿಮಾನಿಗಳೊಂದಿಗೆ ಭಾರತೀಯ ಅಭಿಮಾನಿ ಸೇರಿಕೊಂಡು ಡ್ಯಾನ್ಸ್ ಮಾಡಿದ್ದಾರೆ. ಈ ವೀಡಿಯೋ ವೈರಲ್ ಆಗಿದೆ.

 

ಇದನ್ನೂ ಓದಿ: ಟೀಂ ಇಂಡಿಯಾ ಕೇಸರಿ ಜೆರ್ಸಿಗೆ ಕಾಂಗ್ರೆಸ್‌ ತೀವ್ರ ವಿರೋಧ

ಭಾರತ ವಿರುದ್ಧದ ಸೋಲಿನ ಬಳಿಕ ತೀವ್ರ ಟೀಕೆಗೆ ಗುರಿಯಾಗಿದ್ದ ಪಾಕಿಸ್ತಾನ ಇದೀಗ ಭರ್ಜರಿ ಕಮ್‌ಬ್ಯಾಕ್ ಮಾಡಿದೆ. ಸೋಲಿನಿಂದ ಕಮ್‌ಬ್ಯಾಕ್ ಮಾಡಿರುವ ಪಾಕಿಸ್ತಾನ ಸೌತ್ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ತಂಡವನ್ನು ಮಣಿಸಿ, ಸೆಮಿಫೈನಲ್ ಹೋರಾಟವನ್ನು ಜೀವಂತವಾಗಿರಿಸಿದೆ.