ಮ್ಯಾಂಚೆಸ್ಟರ್(ಜು.10): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯ ಭಾರತೀಯ ಅಭಿಮಾನಿಗಳಿಗೆ ತೀವ್ರ ಹಿನ್ನಡೆ  ತಂದಿದೆ. 240 ರನ್ ಟಾರ್ಗೆಟ್ ಪಡೆದಿರುವ ಭಾರತ 5 ವಿಕೆಟ್ ಕಳೆದುಕೊಂಡು ಆತಂಕ ಎದುರಿಸುತ್ತಿದೆ. ಇದರ ಬೆನ್ನಲ್ಲೇ ಮೈದಾನದಲ್ಲಿದ್ದ ಸಿಖ್ ಅಭಿಮಾನಿಗಳನ್ನು ಲಂಡನ್ ಪೊಲೀಸರು ಬಂಧಿಸಿ ಹೊರಕಳುಹಿಸಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಪಂದ್ಯದಲ್ಲಿ ಕಾಶ್ಮೀರ ಕೂಗು; ICCಗೆ ದೂರು ನೀಡಿದ BCCI!

ಪ್ರೇಕ್ಷಕರ ಗ್ಯಾಲರಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ಭಾರತೀಯ ಮೂಲದ ನಾಲ್ವರು ಸಿಖ್ ಅಭಿಮಾನಿಗಳನ್ನು ಬಂಧಿಸಲಾಗಿದೆ. ಕ್ರೀಡಾಂಗಣದಲ್ಲಿ ರಾಜಕೀಯ ಪ್ರೇರಿತ ಪ್ರತಿಭಟನೆ ಮಾಡಿದ ಕಾರಣಕ್ಕೆ ಅಭಿಮಾನಿಗಳನ್ನು ಆರೆಸ್ಟ್ ಮಾಡಲಾಗಿದೆ. ಪಂಜಾಬ್ ಪ್ರಾಂತ್ಯದಿಂದ ಸಿಖರ ತವರು ಖಲಿಸ್ತಾನವನ್ನು ಸ್ವತಂತ್ರ್ಯಗೊಳಿಸುವಂತೆ ಆಗ್ರಹಿಸಿ ಸಿಖ್ಕರು ಪ್ರತಿಭಟನೆ ಮಾಡಿದ್ದಾರೆ.

ಇದನ್ನೂ ಓದಿ: ಆ ಕರಾಳ ದಿನ ನೆನಪಿಸಿದ ಟೀಂ ಇಂಡಿಯಾದ ಈ ಪ್ರದರ್ಶನ

ಸಿಖ್ ಪ್ರತ್ಯೇಕವಾದಿಗಳ ಪ್ರತಿಭಟನೆ ಜೋರಾಗುತ್ತಿದ್ದಂತೆ ತಕ್ಷಣವೇ ಪೊಲೀಸರು ಅಭಿಮಾನಿಗಳನ್ನು ಬಂಧಿಸಿದ್ದಾರೆ. ಬಲಿಕ ಹೊರಗೆ ಕಳುಹಿಸಿದ್ದಾರೆ. ಕ್ರೀಡಾಂಗಣ ಪ್ರವೇಶಿಸಿದಂತೆ ಎಚ್ಚರಿಸಲಾಗಿದೆ. ಈ ವಿಶ್ವಕಪ್ ಟೂರ್ನಿಯಲ್ಲಿ ರಾಜಕೀಯ ಪ್ರೇರಿತ ಪ್ರತಿಭಟನೆಗಳು ಹೆಚ್ಚಾಗುತ್ತಿದೆ. ಭಾರತ ಹಾಗೂ ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಜಮ್ಮುಕಾಶ್ಮೀರವನ್ನು ಸ್ವತಂತ್ರಗೊಳಿಸುವಂತೆ ವಿಮಾನದಲ್ಲಿ ಬ್ಯಾನರ್ ಪ್ರದರ್ಶಿಸೋ ಮೂಲಕ ಹೋರಾಟ ನಡೆಸಲಾಗಿತ್ತು. ಇದಕ್ಕೆ ಬಿಸಿಸಿಐ ಲಿಖಿತ ದೂರು ಸಲ್ಲಿಸಿತ್ತು. 

ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ನಡುವಿನ ಪಂದ್ಯದಲ್ಲಿ ಬಲೂಚಿಸ್ತಾನದಲ್ಲಿ ಪಾಕಿಸ್ತಾನ ದೌರ್ಜನ್ಯ ನಿಲ್ಲಿಸುವಂತೆ ವಿಮಾನದ ಮೂಲಕ ಬ್ಯಾನರ್ ಪ್ರದರ್ಶಿಸಲಾಗಿತ್ತು.