ಲೀಡ್ಸ್(ಜು.08): ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯಗಳು ಅಂತ್ಯಗೊಂಡಿದೆ. ಇದೀಗ ಸೆಮಿಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಈ ವಿಶ್ವಕಪ್ ಟೂರ್ನಿಯಲ್ಲಿ ಅಂಪೈರ್ ವಿವಾದಾತ್ಮಕ ತೀರ್ಪು, DRS(ಅಂಪೈರ್ ತೀರ್ಪು ಮರುಪರಿಶೀಲನಾ ನಿಯಮ) ಎಡವಟ್ಟು, ಅಭಿಮಾನಿಗಳ ಕಿತ್ತಾಟ ಹೊರತು ಪಡಿಸಿದರೆ ವಿಶ್ವಕಪ್ ಟೂರ್ನಿ ಸರಾಗವಾಗಿ ನಡೆದಿದೆ. ಆದರೆ ಭಾರತ ಹಾಗೂ ಶ್ರೀಲಂಕಾ ನಡುವಿನ ಪಂದ್ಯದ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. 

ಇದನ್ನೂ ಓದಿ: ಏಕದಿನ ಗೆಲುವಿನಲ್ಲಿ ದಾಖಲೆ ಬರೆದ ಟೀಂ ಇಂಡಿಯಾ!

ಭಾರತ ಹಾಗೂ ಶ್ರೀಲಂಕಾ ನಡುವಿನ ಅಂತಿಮ ಲೀಗ್ ಪಂದ್ಯದ ವೇಳೆ ಸ್ವತಂತ್ರ ಕಾಶ್ಮೀರ ಕೂಗು ಕೇಳಿ ಬಂದಿದೆ. ಪಂದ್ಯ ನಡೆಯುತ್ತಿದ್ದ ವೇಳೆ ವಿಮಾನದ ಮೂಲಕ ಕಾಶ್ಮೀರಕ್ಕೆ ನ್ಯಾಯ ಒದಗಿಸಿ ಅನ್ನೋ ಬ್ಯಾನರ್ ಪದರ್ಶಿಸಿಲಾಯಿತು. ಬಳಿಕ ಕಾಶ್ಮೀರದಲ್ಲಿ ನರಮೇಧ ನಿಲ್ಲಿಸಿ ಹಾಗೂ ಕಾಶ್ಮೀರ ಜನರ ಮೇಲೆ ಸೈನಿಕರ ದಬ್ಬಾಳಿಕೆಯನ್ನು ನಿಲ್ಲಿಸಿ ಎಂಬ ಮೂರು ಬ್ಯಾನರ್ ಪ್ರದರ್ಶಿಸಲಾಗಿದೆ. ಮೂರು ಬಾರಿ ವಿಮಾನ ಕ್ರೀಡಾಂಗಣ ಮೇಲ್ಬಾಗದಲ್ಲಿ ಹಾರಾಟ ನಡೆಸಿ ಈ ಬ್ಯಾನರ್ ಪ್ರದರ್ಶಿಸಲಾಗಿದೆ.

ಇದನ್ನೂ ಓದಿ: ಲಂಕಾ ವಿರುದ್ಧ ರೋಹಿತ್ ಸೆಂಚುರಿ; ಸಚಿನ್, ಸಂಗಕ್ಕಾರ ದಾಖಲೆ ಪುಡಿ ಪುಡಿ!

 

ಭಾರತದ ವಿಚಾರವನ್ನು ಕ್ರೀಡೆಯಲ್ಲಿ ಎಳೆದು ತರಲಾಗಿದೆ. ಇಷ್ಟೇ ಅಲ್ಲ ನಿಯಮ ಬಾಹಿರವಾಗಿ ಕ್ರೀಡಾಂಗಣದಲ್ಲಿ ಮೇಲ್ಭಾಗದಲ್ಲಿ ವಿಮಾನ ಹಾರಾಟ ನಡೆಸಿದೆ. ಘಟನೆ ನಡೆದ ಬೆನ್ನಲ್ಲೇ ಬಿಸಿಸಿಐ, ಐಸಿಸಿಗೆ ಖಡಕ್ ಎಚ್ಚರಿಕೆ ನೀಡಿದೆ. ವಿಮಾನ ಹಾರಾಟದ ಅನುಮತಿ ಇಲ್ಲದಿದ್ದರೂ ಹಾರಾಟ ನಡೆಸಿದ್ದು ಹೇಗೆ? ಎಂದು ಬಿಸಿಸಿಐ ಪ್ರಶ್ನಿಸಿದೆ. ಇಷ್ಟೇ ಆಟಗಾರರ ಸುರಕ್ಷತೆ ಮುಖ್ಯ. ಈ ವಿಚಾರದಲ್ಲಿ ರಾಜಿಯಾಗುವುದಿಲ್ಲ ಎಂದಿದೆ. ಇಷ್ಟೇ ಅಲ್ಲ ಮಂದಿನ ಹಂತದಲ್ಲಿ ಈ ಲೋಪ ಪುನರಾವರ್ತನೆಯಾದರೆ ಸಹಿಸಲ್ಲ ಎಂದಿದೆ. ಐಸಿಸಿಗೆ ಬಿಸಿಸಿಐ ಲಿಖಿತ ದೂರು ನೀಡಿದೆ.