Asianet Suvarna News Asianet Suvarna News

ಝಂಫಾ ಮೇಲೆ ಬಾಲ್ ಟ್ಯಾಂಪರಿಂಗ್ ಆರೋಪ-ನಾಯಕ ಫಿಂಚ್ ಹೇಳಿದ್ದೇನು?

ಭಾರತ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಸ್ಪಿನ್ನರ್ ಆ್ಯಡಮ್ ಝಂಪಾ ಮೇಲೆ ಬಾಲ್ ಟ್ಯಾಂಪರಿಂಗ್ ಆರೋಪ ಕೇಳಿ ಬಂದಿತ್ತು. ಝಂಪಾ ಮೇಲಿನ ಆರೋಪಕ್ಕೆ ನಾಯಕ ಆರೋನ್ ಫಿಂಚ್ ಹೇಳಿದ್ದೇನು? ಇಲ್ಲಿದೆ ವಿವರ.
 

World cup 2019 Aaron Finch dismisses ball-tampering claims on Adam Zampa during
Author
Bengaluru, First Published Jun 10, 2019, 8:20 PM IST

ಓವಲ್(ಜೂ.10): ಭಾರತ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಸ್ಪಿನ್ನರ್ ಆ್ಯಡಮ್ ಝಂಪಾ ಮೇಲಿ ಬಾಲ್ ಟ್ಯಾಂಪರಿಂಗ್ ಆರೋಪ ಕೇಳಿ ಬಂದಿತ್ತು. ಝಂಪಾ ಪ್ರತಿ ಎಸೆತಕ್ಕೂ ಮುನ್ನ ಜೇಬಿನೊಳಗಿಂದ ವಸ್ತು ತೆಗೆದು ಬಾಲ್ ಮೇಲೆ ಹಚ್ಚಿದಂತೆ ಇರೋ ವೀಡಿಯೋ ವೈರಲ್ ಆಗಿತ್ತು. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಬಾಲ್ ಟ್ಯಾಂಪರಿಂಗ್ ನಡೆಸಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಇದೀಗ ನಾಯಕ ಆರೋನ್ ಫಿಂಚ್ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಅಭಿಮಾನಿಗಳ ಪರ ಸ್ಮಿತ್ ಬಳಿ ಕ್ಷಮೆ ಕೇಳಿದ ಕೊಹ್ಲಿ- ಟ್ವಿಟರ್‌ನಲ್ಲಿ ಮೆಚ್ಚುಗೆ!

ಸ್ಪಿನ್ನರ್ ಝಂಪಾ ಕೈ ಬಿಸಿ ಮಾಡುವ ಸಾಧನವನ್ನು ಪ್ರತಿ ಪಂದ್ಯಕ್ಕೂ ಇಟ್ಟುಕೊಂಡಿರುತ್ತಾರೆ. ನೀರಿನಿಂದ ಬಾಲ್ ಒದ್ದೆಯಾದಾಗ ಸ್ಪಿನ್ ಪರಿಣಾಮಕಾರಿಯಾಗಿರುವುದಿಲ್ಲ. ಹೀಗಾಗಿ ಝಂಪಾ ಹ್ಯಾಂಡ್ ವಾರ್ಮರ್‌ನಿಂದ ಕೈ ಬಿಸಿ ಮಾಡಿ ಬೌಲಿಂಗ್ ಮಾಡುತ್ತಾರೆ. ಇದು ಬಾಲ್ ಟ್ಯಾಂಪರಿಂಗ್ ಅಲ್ಲ ಎಂದು ಫಿಂಚ್ ಹೇಳಿದ್ದಾರೆ.

 

 

ಇದನ್ನೂ ಓದಿ: ಯುವಿ ನಿವೃತ್ತಿ- ನಿಟ್ಟುಸಿರುಬಿಟ್ಟ ಸ್ಟುವರ್ಟ್ ಬ್ರಾಡ್!

ಸಾಮಾಜಿಕ ಜಾಲಾತಣದಲ್ಲಿ ಹರಿದಾಡುತ್ತಿರುವ ಫೋಟ್ ಅಥವಾ ವಿಡೀಯೋ ನಾನು ಗಮನಿಸಿಲ್ಲ. ಆದರೆ ಝಂಫಾ ಹಳಿ ಹ್ಯಾಂಡ್ ವಾರ್ಮರ್ ಮಾತ್ರ ಇದೆ ಎಂದು ಫಿಂಚ್ ಹೇಳಿದ್ದಾರೆ. ಈ ಮೂಲಕ ಬಾಲ್ ಟ್ಯಾಂಪರಿಂಗ್ ಆರೋಪ ತಳ್ಳಿ ಹಾಕಿದ್ದಾರೆ. 

Follow Us:
Download App:
  • android
  • ios