ಮುಂಬೈ(ಜೂ.10): ಯುವರಾಜ್ ಸಿಂಗ್ ಹೆಸರು ಕೇಳಿದರೆ ಬೆಚ್ಚಿ ಬೀಳುವ ಬೌಲರ್ ಅಂದರೆ ಅದು ಇಂಗ್ಲೆಂಡ್‌ ವೇಗಿ ಸ್ಟುವರ್ಟ್ ಬ್ರಾಡ್. 2007ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸ್ಟುವರ್ಟ್ ಬ್ರಾಡ್ ಓವರ್‌ನ 6 ಎಸೆತಗಳನ್ನೂ ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದರು. ಅದು ಸ್ಟುವರ್ಟ್ ಬ್ರಾಡ್ ಕರಿಯರ್‌ನ ಅತ್ಯಂತ ಕೆಟ್ಟ ದಿನವಾಗಿತ್ತು. ಇದೀಗ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುತ್ತಿದ್ದಂತೆ ನಿಟ್ಟುಸಿರುಬಿಟ್ಟಿದ್ದಾರೆ.

ಇದನ್ನೂ ಓದಿ: ಯುವರಾಜ್ ಸಿಂಗ್ ನಿವೃತ್ತಿ- ವಿಶ್ವಕಪ್ ಹೀರೋಗೆ ಶುಭಕೋರಿದ ಲೆಜೆಂಡ್ಸ್!

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಯುವರಾಜ್ ಸಿಂಗ್ ವಿದಾಯ ಹೇಳುತ್ತಿದ್ದಂತೆ, ವೇಗಿ ಸ್ಟುವರ್ಟ್ ಬ್ರಾಡ್ ಶುಭಕೋರಿದ್ದಾರೆ.  ಮಂದಿನ ದಿನಗಳನ್ನು ಆನಂದಿಸಿ ದಿಗ್ಗಜ ಎಂದು ಶುಭಕೋರಿದ್ದಾರೆ. ಯುವಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಕ್ರೀಯರಾಗಿದ್ದಾಗ,  ಸ್ಟುವರ್ಟ್ ಬ್ರಾಡ್ ಕ್ರಿಕೆಟ್ ದಿನವನ್ನು ಆನಂದಿಸಿಲ್ಲ. ಇದೀಗ ಯುವಿಗೆ ವಿದಾಯದ ದಿನಗಳನ್ನು ಆನಂದಿಸಿ ಎಂದಿದ್ದಾರೆ.
 

 
 
 
 
 
 
 
 
 
 
 
 
 

Enjoy retirement Legend @yuvisofficial 🙌🏻 🏏

A post shared by Stuart Broad (@stuartbroad8) on Jun 10, 2019 at 3:17am PDT