ಲಂಡನ್(ಜೂ.14): ವಿಶ್ವಕಪ್ ಟೂರ್ನಿ ಯಾರು ಗೆಲ್ಲುತ್ತಾರೆ? ಯಾರು ಸೆಮಿಫೈನಲ್ ಪ್ರವೇಶಿಸುತ್ತಾರೆ ಅನ್ನೋ ಕುತೂಹಲಕ್ಕೆ ಈಗಾಗಲೇ ಹಲವು ಕ್ರಿಕೆಟ್ ದಿಗ್ಗಜರು ಉತ್ತರ ನೀಡಿದ್ದಾರೆ. ಇದೀಗ GOOGLE ಸಿಇಒ ಸುಂದರ್ ಪಿಚೈ ಈ ಬಾರಿಯ ವಿಶ್ವಕಪ್ ಫೈನಲ್‌ನಲ್ಲಿ ಸೆಣಸೋ ತಂಡಗಳು ಯಾವುದು ಅನ್ನೋ ಭವಿಷ್ಯ ನುಡಿದಿದ್ದಾರೆ. ಈ ಮೂಲಕ ಸುಂದರ್ ಪಿಚೈ ಕ್ರಿಕೆಟ್ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿಸಿದ್ದಾರೆ.

ಇದನ್ನೂ ಓದಿ: ಮಳೆಯಿಂದ ಪಂದ್ಯ ರದ್ದು-ಇಂಗ್ಲೆಂಡ್ ಕಾಲೆಳೆದ ಗಂಗೂಲಿ!

ಸುಂದರ್ ಪಿಚೈ ಪ್ರಕಾರ ಟೀಂ ಇಂಡಿಯಾ ಹಾಗೂ ಆತಿಥೇಯ ಇಂಗ್ಲೆಂಡ್ ಫೈನಲ್ ಪ್ರವೇಶಿಸಲಿದೆ. ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಅತ್ಯುತ್ತಮ ತಂಡಗಳು. ಟೀಂ ಇಂಡಿಯಾಗೆ ಸಾಕಷ್ಟು ಸವಾಲುಗಳಿವೆ. ನಾನು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾವನ್ನು ಬೆಂಬಲಿಸುತ್ತೇನೆ ಎಂದು ಸುಂದರ್ ಪಿಚೈ ಹೇಳಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ 2019: ಪಾಕಿಸ್ತಾನಕ್ಕೆ "ಅದನ್ನು" ಬಿಚ್ಚಿ ತೋರಿಸಿದ ಪೂನಂ ಪಾಂಡೆ!

ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ ಆರಂಭಿಕ 2 ಪಂದ್ಯಗಳನ್ನು ಗೆದ್ದುಕೊಂಡಿದ್ದರೆ, 3ನೇ ಪಂದ್ಯ ಮಳೆಯಿಂದ ರದ್ದಾಗಿದೆ. ಇದೀಗ ಜೂನ್ 16 ರಂದು ಪಾಕಿಸ್ತಾನ ವಿರುದ್ಧ ಹೋರಾಟ ನಡೆಸಲಿದೆ.