ಸೌತ್ ಆಫ್ರಿಕಾ vs ಶ್ರೀಲಂಕಾ ಸ್ಕೋರ್ ಎಷ್ಟು?

ಇಸ್ಲಾಮಾಬಾದ್(ಜೂ.28): ಟೀಂ  ಇಂಡಿಯಾ ಅಲ್ರೌಂಡರ್ ಹಾರ್ದಿಕ್ ಪಾಂಡ್ಯ  ಸದ್ಯ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 38 ಎಸೆತದಲ್ಲಿ 46 ರನ್ ಸಿಡಿಸಿದ್ದರು. 1 ವಿಕೆಟ್ ಕಬಳಿಸಿ ಗಮನಸೆಳೆದಿದ್ದರು. ವೆಸ್ಟ್ ಇಂಡೀಸ್ ವಿರುದ್ಧ ಪಾಂಡ್ಯ ಪ್ರದರ್ಶನ ಗಮನಿಸಿದ ಪಾಕಿಸ್ತಾನ ಮಾಜಿ ಆಲ್ರೌಂಡರ್ ಅಬ್ದುಲ್ ರಜಾಕ್ ಇದೀಗ ಪಾಂಡ್ಯ ಕೋಚ್ ಆಗಲು ಇಂಗಿತ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಿವಾದಾತ್ಮಕ ತೀರ್ಪು- ಅಂಪೈರ್‌ಗೆ ತಿರುಗೇಟು ನೀಡಿದ ರೋಹಿತ್ ಶರ್ಮಾ!

ವೆಸ್ಟ್ ಇಂಡೀಸ್ ವಿರುದ್ದ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್  ಪ್ರದರ್ಶನ ಗಮನಿಸಿದ್ದೇನೆ. ಪಾಂಡ್ಯ ಫೂಟ್ ವರ್ಕ್, ದೇಹದ ಬ್ಯಾಲೆನ್ಸ್ ಸರಿಯಾಗಿಲ್ಲ. ಭರ್ಜರಿ ಹೊಡೆತಕ್ಕೆ ಯತ್ನಿಸುವಾಗ ಪಾಂಡ್ಯ ಬ್ಯಾಲೆನ್ಸ್ ತಪ್ಪುತ್ತಿದೆ. ನಾನು ಪಾಂಡ್ಯಗೆ ಕೋಚಿಂಗ್ ಮಾಡಲು ಇಚ್ಚಿಸುತ್ತೇನೆ. ಯುಎಇನಲ್ಲಿ ಪಾಂಡ್ಯಗೆ ಕೋಚಿಂಗ್ ಮಾಡಬಹುದು. ಹಾರ್ದಿಕ್ ಪಾಂಡ್ಯನನ್ನು ವಿಶ್ವದ ಬೆಸ್ಟ್ ಆಲ್ರೌಂಡರ್ ಮಾಡೋ ಮನಸ್ಸು ಬಿಸಿಸಿಐಗಿದ್ದರೆ, ನಾನು ಯಾವುತ್ತೂ ಲಭ್ಯನಿದ್ದೇನೆ ಎಂದು ರಜಾಕ್ ಹೇಳಿದ್ದಾರೆ.

 

ಇದನ್ನೂ ಓದಿ:ಇಂಡೋ-ಪಾಕ್ ಅಭಿಮಾನಿಗಳಿಂದ ಡ್ಯಾನ್ಸ್-ವೈರಲ್ ಆಯ್ತು ವೀಡಿಯೋ!

ಅಬ್ದುಲ್ ರಜಾಕ್ ಪಾಕಿಸ್ತಾನ ಪರ 269 ವಿಕೆಟ್ ಹಾಗೂ 5000  ರನ್ ಸಿಡಿಸಿದ್ದಾರೆ. ಪಾಕಿಸ್ತಾನ ಕಂಡ ಅತ್ಯುತ್ತಮ ಆಲ್ರೌಂಡರ್ ಅನ್ನೋ ಹೆಗ್ಗಳಿಗೆಗೆ ಅಬ್ದುಲ್ ರಜಾಕ್ ಪಾತ್ರರಾಗಿದ್ದರು. ಇದೀಗ ಪಾಂಡ್ಯನನ್ನು ವಿಶ್ವದ ಬೆಸ್ಟ್ ಆಲ್ರೌಂಡರ್ ಮಾಡೋ ಇಚ್ಚೆ ವ್ಯಕ್ತಪಡಿಸಿದ್ದಾರೆ.