ಮ್ಯಾಂಚೆಸ್ಟರ್(ಜು.10): ವಿಶ್ವಕಪ್ ಸೆಮಿಫೈನಲ್ ಪಂದ್ಯ ಭಾರತಕ್ಕೆ ನಿರಾಸೆ  ಮೇಲೆ ನಿರಾಸೆ ತಂದೊಡ್ಡುತ್ತಿದೆ. ಮೀಸಲು ದಿನದಾಟ ಟೀಂ ಇಂಡಿಯಾದ ಅದೃಷ್ಠವನ್ನೇ ಕಸಿದುಕೊಂಡಂತಿದೆ. ನ್ಯೂಜಿಲೆಂಡ್ ವಿರುದ್ಧ 240 ರನ್ ಟಾರ್ಗೆಟ್ ಪಡೆದಿರುವ ಭಾರತ, ಆರಂಭದಲ್ಲೇ ಪ್ರಮುಖ 4 ವಿಕೆಟ್ ಕಳೆದುಕೊಂಡು, ಸಂಕಷ್ಟದಲ್ಲಿದೆ. ಇದೀಗ ನಾಯಕ ವಿರಾಟ್ ಕೊಹ್ಲಿ 1 ರನ್ ಸಿಡಿಸಿ ಔಟಾಗಿರುವುದು ಟೀಂ ಇಂಡಿಯಾ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಆ ಕರಾಳ ದಿನ ನೆನಪಿಸಿದ ಟೀಂ ಇಂಡಿಯಾದ ಈ ಪ್ರದರ್ಶನ

ನ್ಯೂಜಿಲೆಂಡ್ ವಿರುದ್ದದ ಸೆಮಿಫೈನಲ್ ಪಂದ್ಯದಲ್ಲಿ ಕೊಹ್ಲಿ 1 ರನ್ ಸಿಡಿಸಿ LB ಬಲೆಗೆ ಬಿದ್ದರು. ಕೊಹ್ಲಿ ಪೆವಿಲಿಯನ್ ಸೇರುತ್ತಿದ್ದಂತೆ ಆತಂಕ ಹೆಚ್ಚಾಗಿದೆ. ಕಾರಣ 2015ರಲ್ಲಿ ನಡೆದ  ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲೂ ಕೊಹ್ಲಿ 1 ರನ್ ಸಿಡಿಸಿ ಔಟಾಗಿದ್ದರು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 1 ರನ್ ಸಿಡಿಸಿ ವೇಗಿ ಮಿಚೆಲ್ ಜಾನ್ಸನ್‌ಗೆ ವಿಕೆಟ್ ಒಪ್ಪಿಸಿದ್ದರು.

ಇದನ್ನೂ ಓದಿ: ಪೂನಂ ಹಿಂದಿಕ್ಕಿದ ಶರ್ಲಿನ್, ವಿಶ್ವಕಪ್ ಗೆಲುವಿಗೆ ಎದೆಯಾಳದ ಹಾರೈಕೆ!

ಇದೀಗ ನ್ಯೂಜಿಲೆಂಡ್ ವಿರುದ್ದ ಕೊಹ್ಲಿ ವೇಗಿ ಟ್ರೆಂಟ್ ಬೋಲ್ಟ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ಹೀಗಾಗಿ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಕಾರಣ 2015ರ ವಿಶ್ವಕಪ್ ಟೂರ್ನಿಯ  ಸೆಮಿಫೈನಲ್ ಪಂದ್ಯದಲ್ಲಿ ಭಾರತ 95 ರನ್ ಸೋಲು ಅನುಭವಿಸಿತ್ತು. 2011ರ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 9 ರನ್ ಸಿಡಿಸಿದ್ದರು. 2011ರಲ್ಲಿ ಭಾರತ ವಿಶ್ವಕಪ್ ಗೆಲುವು ಸಾಧಿಸಿತ್ತು.  ಇದೀಗ ಕೊಹ್ಲಿ ಸೇರಿದಂತೆ ನಾಲ್ವರು ಪೆವಿಲಿಯನ್ ಸೇರಿರುವುದು ಟೀಂ ಇಂಡಿಯಾ ಗೆಲುವಿನ ಹಾದಿ ಮತ್ತಷ್ಟು ಕಠಿಣಗೊಳಿಸಿದೆ. ಅದರಲ್ಲೂ ಕೊಹ್ಲಿ ಔಟ್‌ಗಿಂತ 1 ರನ್‌ಗೆ ಪೆವಿಲಿಯನ್ ಸೇರಿರುವುದು ಇದೀಗ ತಲೆನೋವು ಹೆಚ್ಚಿಸಿದೆ.