ಸೌಥಾಂಪ್ಟನ್(ಜೂ.04):  ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.  ಜೂನ್ 5 ರಂದು ಸೌತ್ಆಫ್ರಿಕಾ ವಿರುದ್ಧ ಮೊದಲ ಪಂದ್ಯ ಆಡಲಿದೆ. ಇದಕ್ಕಾಗಿ ಭಾರತ ಭರ್ಜರಿ ಅಭ್ಯಾಸ ನಡೆಸಿದೆ. ಇದೀಗ ಟೀಂ ಇಂಡಿಯಾವನ್ನು ಬೆಂಬಲಿಸಲು ವಿಶೇಷ ಅತಿಥಿ ಇಂಗ್ಲೆಂಡ್ ತೆರಳಿದ್ದಾರೆ.

ಇದನ್ನೂ ಓದಿ: ವಾಸೀಂ ಅಕ್ರಂಗೆ ಪರ್ಫೆಕ್ಟ್ Birthday ಗಿಫ್ಟ್ ಕೊಟ್ಟ ಪಾಕಿಸ್ತಾನ

ಟೀಂ ಇಂಡಿಯಾಗೆ ಸಪೂರ್ಟ್ ಮಾಡಲು ಇಂಗ್ಲೆಂಡ್ ತೆರಳಿದ ವಿಶೇಷ ಅತಿಥಿ, ಎಂ.ಎಸ್.ಧೋನಿ ಪುತ್ರಿ ಝಿವಾ ಧೋನಿ. ಧೋನಿ ಹಾಗೂ ಭಾರತ ತಂಡವನ್ನು ಬೆಂಬಲಿಸಲು ಝಿವಾ ಧೋನಿ ಇಂಗ್ಲೆಂಡ್ ತೆರಳಿದ್ದಾರೆ. ಸೌತ್ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಝಿವಾ ಧೋನಿ, ಟೀಂ ಇಂಡಿಯಾ ಹಾಗೂ  ಧೋನಿಗೆ ಸಪೂರ್ಟ್ ಮಾಡಲಿದ್ದಾರೆ. 

 

 
 
 
 
 
 
 
 
 
 
 
 
 

Travel times !

A post shared by ZIVA SINGH DHONI (@ziva_singh_dhoni) on Jun 3, 2019 at 2:21am PDT

 

ಇದನ್ನೂ ಓದಿ: ಆ ’ಒಂದು’ ಸಮಸ್ಯೆಯಿಂದ ಹೊರಬರುತ್ತಾ ದಕ್ಷಿಣ ಆಫ್ರಿಕಾ..?

ಝಿವಾ ಧೋನಿ ಲಂಡನ್‌ನ ನಗರದಲ್ಲಿನ ಫೋಟೋವನ್ನು ಧೋನಿ ಪತ್ನಿ ಸಾಕ್ಷಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಪ್ರತಿ ಪಂದ್ಯಕ್ಕೂ ಹಾಜರಾಗಿದ್ದ  ಝಿವಾ ಇದೀಗ ವಿಶ್ವಕಪ್ ಟೂರ್ನಿಯ ಎಲ್ಲಾ ಪಂದ್ಯಗಳಿಗೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.