ಲಂಡನ್[ಜೂ.04]: ಬಲಿಷ್ಠ ಇಂಗ್ಲೆಂಡ್ ತಂಡಕ್ಕೆ ಸೋಲಿನ ರುಚಿ ತೋರಿಸಿದ ಪಾಕಿಸ್ತಾನ ತಂಡದತ್ತ ಕ್ರಿಕೆಟ್ ಜಗತ್ತೇ ಅಚ್ಚರಿಯಿಂದ ನೋಡುತ್ತಿದೆ. ಸತತ 11 ಪಂದ್ಯಗಳ ಸೋಲಿನ ಬಳಿಕ ಪಾಕಿಸ್ತಾನ ತಂಡವು 14 ರನ್’ಗಳಿಂದ ಇಂಗ್ಲೆಂಡ್’ಗೆ ಸೋಲಿನ ರುಚಿ ತೋರಿಸಿದೆ.

ವಿಶ್ವಕಪ್ 2019: ಇಂಗ್ಲೆಂಡ್‌ ಮಣಿಸಿ ಸೇಡು ತೀರಿಸಿಕೊಂಡ ಪಾಕಿಸ್ತಾನ

ವೆಸ್ಟ್ ಇಂಡೀಸ್ ವಿರುದ್ಧ 105 ರನ್’ಗಳಿಗೆ ಆಲೌಟ್ ಆಗಿ 7 ವಿಕೆಟ್’ಗಳ ಹೀನಾಯ ಸೋಲು ಕಂಡಿದ್ದ ಪಾಕಿಸ್ತಾನ, ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್’ಗೆ ಬರೋಬ್ಬರಿ 349 ರನ್’ಗಳ ಗುರಿ ನೀಡಿತ್ತು. ಇನ್ನು ಇಂಗ್ಲೆಂಡ್ ಪರ ಜೋ ರೂಟ್[107] ಹಾಗೂ ಜೋಸ್ ಬಟ್ಲರ್[103] ಶತಕ ಸಿಡಿಸಿದರೂ, ವಹಾಬ್ ರಿಯಾಜ್ ಕೊನೆಯಲ್ಲಿ ಮಿಂಚಿನ ಬೌಲಿಂಗ್ ಮೂಲಕ ಇಂಗ್ಲೆಂಡ್’ಗೆ ಶಾಕ್ ನೀಡಿದರು. ಅಲ್ಲದೆ ಈ ಹಿಂದೆ ಇಂಗ್ಲೆಂಡ್ ವಿರುದ್ಧ 4-0 ಅಂತರದ ಸರಣಿ ಸೋಲಿಗೂ ಪಾಕ್ ಸೇಡು ತೀರಿಸಿಕೊಂಡಿತು. ಜೊತೆಗೆ ಪಾಕ್ ದಿಗ್ಗಜ ಕ್ರಿಕೆಟಿಗ ವಾಸೀಂ ಅಕ್ರಂ ಹುಟ್ಟುಹಬ್ಬಕ್ಕೆ ಸ್ಮರಣೀಯ ಗಿಫ್ಟ್ ನೀಡಿತು.

ಇಂಗ್ಲೆಂಡ್-ಪಾಕಿಸ್ತಾನ ನಡುವಿನ ಪಂದ್ಯ ಆರಂಭಕ್ಕೂ ಮುನ್ನ ಪಾಕ್ ಪಂದ್ಯ ಗೆದ್ದರೆ ಅದೇ ನನ್ನ ಬೆಸ್ಟ್ ಗಿಫ್ಟ್ ಆಗಿರಲಿದೆ ಎಂದು ಟ್ವೀಟ್ ಮಾಡಿದ್ದರು. ಪಂದ್ಯ ಗೆದ್ದ ಬಳಿಕ ಪಾಕ್ ತಂಡಕ್ಕೆ ಧನ್ಯವಾದ ಅರ್ಪಿಸಿದರು.

ಇನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಸೇರಿದಂತೆ ಹಲವರು ಪಾಕಿಸ್ತಾನದ ಪ್ರದರ್ಶನವನ್ನು ಕೊಂಡಾಡಿದ್ದಾರೆ.