ಲಂಡನ್(ಜೂ.03): ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯಗಳಲ್ಲಿ ದುರ್ಬಲ ಎನಿಸಿಕೊಂಡ ತಂಡಗಳು ಬಲಿಷ್ಠ ತಂಡಗಳಿಗೆ ಶಾಕ್ ನೀಡುತ್ತಿದೆ. ಹೀಗಾಗಿ ಟೂರ್ನಿ ಆರಂಭದಲ್ಲೇ ರೋಚಕತೆಗೆ ಸಾಕ್ಷಿಯಾಗಿದೆ. ಇದೀಗ ಭಾರತೀಯರ ಚಿತ್ತ ಜೂನ್ 5 ರ ಪಂದ್ಯದ ಮೇಲಿದೆ. ಭಾರತ ಹಾಗೂ ಸೌತ್ಆಫ್ರಿಕಾ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಆದರೆ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿತಾ ತಂಡದಿಂದ ಮತ್ತೊರ್ವ ಟೂರ್ನಿಯಿಂದಲೇ ಔಟ್ ಆಗಿದ್ದಾರೆ.

ಇದನ್ನೂ ಓದಿ: ವಿರಾಟ್ ಕೊಹ್ಲಿಯನ್ನು ಕೆಣಕಿದ ರಬಾಡ..!

ದಕ್ಷಿಣ ಆಫ್ರಿತಾ ತಂಡಕ್ಕೆ ಇಂಜುರಿ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಇದೀಗ ಸ್ಟಾರ್ ವೇಗಿ ಲುಂಗಿ ಎನ್‌ಗಿಡಿ  ಗಾಯಗೊಂಡಿದ್ದಾರೆ.  ಹೀಗಾಗಿ  ಭಾರತ ವಿರುದ್ಧದ ಮಹತ್ವದ ಪಂದ್ಯದಿಂದ ಲುಂಗಿ ಹೊರಗುಳಿದಿದ್ದಾರೆ. ಈಗಾಗಲೇ ಸತತ 2 ಸೋಲು ಕಂಡಿರುವ ಸೌತ್ಆಫ್ರಿಕಾ ತಂಡಕ್ಕೆ ಮತ್ತೊಂದು ಸಂಕಷ್ಠ ತಂಡದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ: ಹರಿಣಗಳ ಶಿಕಾರಿ ಮಾಡಿದ ಬಾಂಗ್ಲಾ ಹುಲಿಗಳು..!

ಭಾರತ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿರು ಲುಂಗಿ, ಜೂನ್ 10 ರಂದು ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಕ್ಕೆ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ಸೌತ್ಆಫ್ರಿಕಾ ಟೀಂ ಮ್ಯಾನೇಜರ್ ಹೇಳಿದ್ದಾರೆ. ಸೌತ್ಆಫ್ರಿಕಾ ತಂಡದ ಇಂಜುರಿ ಪಟ್ಟಿ ಬೆಳೆಯುತ್ತಿದೆ. ಡೇಲ್ ಸ್ಟೇನ್, ಹಾಶಿಮ್ ಆಮ್ಲಾ, ನಾಯಕ ಫಾಫ್ ಡುಪ್ಲೆಸಿಸ್  ಬಳಿಕ ಲುಂಗಿ ಎನ್‌ಗಿಡಿ ಕೂಡ ಗಾಯಕ್ಕೆ ತುತ್ತಾಗಿರೋದು ಸೌತ್ಆಫ್ರಿಕಾ ವಿಶ್ವಕಪ್ ಪಯಣಕ್ಕೆ ಅಡ್ಡಿಯಾಗುತ್ತಿದೆ.

ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ: